Advertisement

ಗೋಲ್ಡನ್‌ ಗ್ಲೋಬ್‌ ರೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡ ನೌಕೆ

06:00 AM Sep 23, 2018 | Team Udayavani |

ಕೊಚ್ಚಿ: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಲ್ಡನ್‌ ಗ್ಲೋಬ್‌ ರೇಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ನೌಕಾಪಡೆಯ ನೌಕೆ ಚಂಡಮಾರುತಕ್ಕೆ ಸಿಲುಕಿದೆ. ಇದರಲ್ಲಿದ್ದ ನೌಕಾಸೇನೆಯ ಅಧಿಕಾರಿ ಅಭಿಲಾಶ್‌ ಟಾಮಿ ಅವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ನೌಕಾಪಡೆ ಹೇಳಿದೆ. ದೇಶೀಯವಾಗಿ ನಿರ್ಮಿಸಿದ್ದ ನೌಕೆ ತುರಿಯಾ ಈ ಸ್ಪರ್ಧೆಯಲ್ಲಿ ಭಾಗ. ವಹಿಸಿತ್ತು. ಈ ವೇಳೆ ವಿಪರೀತ ಚಂಡಮಾರುತಕ್ಕೆ ಸಿಲುಕಿದ ನೌಕೆಯ ಹಿಂಭಾಗಕ್ಕೆ ಹಾನಿ ಯಾಗಿದೆ. ಆಸ್ಟ್ರೇಲಿಯಾದ ಪರ್ತ್‌ನಲ್ಲಿರುವ 1900 ನಾಟಿಕಲ್‌ ಮೈಲು ದೂರದಲ್ಲಿ ಇವರ ನೌಕೆ ಹಾನಿಗೊಳಗಾಗಿದೆ. ಈ ಸ್ಪರ್ಧೆ ಜುಲೈ 1 ರಂದು ಆರಂಭವಾಗಿದ್ದು, ಈವರೆಗೆ ಒಟ್ಟು 10,500 ನಾಟಿಕಲ್‌ ಮೈಲು ಪ್ರಯಾಣಿಸಿ, ಮೂರನೇ ಸ್ಥಾನದಲ್ಲಿದ್ದಾರೆ. 

Advertisement

ಐರ್ಲೆಂಡ್‌ನ‌ ಗ್ರೆಗೋರ್‌ ಮೆಕ್‌ಗುಕಿನ್‌ ಹಾಗೂ ಎರಡನೇ ಸ್ಥಾನದಲ್ಲಿದ್ದ ಡಚ್‌ ನಾಗರಿಕ ಮಾರ್ಕ್‌ ಸ್ಲಾಟ್ಸ್‌ ನೌಕೆ ಕೂಡ ಹಾನಿಗೊಳಗಾಗಿದೆ. ಆದರೆ ಮೆಕ್‌ಗುಕಿನ್‌ ಮತ್ತು ಸ್ಲಾಟ್ಸ್‌ಗೆ ಯಾವುದೇ ಅಪಾಯವಾಗಿಲ್ಲ. ಜಗತ್ತನ್ನು ನೌಕೆಯಲ್ಲಿ ಸುತ್ತುಹಾಕುವ ಈ ಸಾಹಸದಲ್ಲಿ ಟಾಮಿ ಎರಡನೇ ಬಾರಿ ಭಾಗವಹಿಸುತ್ತಿದ್ದಾರೆ. ಒಟ್ಟು 30 ಸಾವಿರ ಮೈಲಿಯನ್ನು ಇವರು ಸಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next