Advertisement

ಸಾಗರ: ಪಾಲಿಷ್ ಮಾಡುವ ನೆಪದಲ್ಲಿ ಮಾಂಗಲ್ಯ ಸರ ಕಳವು

05:06 PM Apr 27, 2022 | Suhan S |

ಸಾಗರ: ತಾಲೂಕಿನ ಕೋಟೆಕೊಪ್ಪ ಗ್ರಾಮದಲ್ಲಿ ಮಂಗಳವಾರ ಆಭರಣ ಪಾಲಿಷ್ ಮಾಡಿಕೊಡುವುದಾಗಿ ನಂಬಿಸಿ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಗ್ರಾಮದ ಸರೋಜಮ್ಮ ಎಂಬುವವರ ಮನೆಗೆ ಹೋದ ಈ ಯುವಕರು ಮೊದಲು ಬೆಳ್ಳಿಯ ಗೆಜ್ಜೆಯನ್ನು ಪಾಲಿಷ್ ಮಾಡಿಕೊಟ್ಟಿದ್ದಾರೆ. ನಂತರ ಮಾಂಗಲ್ಯ ಸರವನ್ನು ಪಾಲಿಷ್ ಮಾಡುವುದಾಗಿ ಹೇಳಿ ಸರೋಜಮ್ಮ ಅವರಿಂದ ಅದನ್ನು ಪಡೆದು ಅಲ್ಲಿಂದ ಪರಾರಿಯಾಗಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next