ಬೆಂಗಳೂರು: ಹಾಡಹಗಲೇ ಆಭರಣಗಳ ಮಳಿಗೆಗೆ ನುಗ್ಗಿರುವ ಇಬ್ಬರು ದುಷ್ಕರ್ಮಿಗಳು, ಮಳಿಗೆಯ ಕೆಲಸಗಾರನಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಒಂದೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ, 3.96 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಾಲಹಳ್ಳಿಯ ಎಂಇಎಸ್ ರಸ್ತೆಯ ವಿನೋದ್ ಬ್ಯಾಂಕರ್ಸ್ ಅಂಡ್ ಜ್ಯುವೆಲರ್ಸ್ ಮಳಿಗೆಯಲ್ಲಿ ಭಾನುವಾರ ಈ ಸಿನಿಮೀಯ ಮಾದರಿ ದರೋಡೆ ನಡೆದಿದೆ. ದರೋಡೆಯಾದ ಚಿ®ದ ° ಮಳಿಗೆಯಲ್ಲಿ ರಾಹುಲ್ ಸಂಜಯ್ ಭಾಯ್ ಶಾ ಎಂಬಾತ ಕೆಲಸ ಮಾಡುತ್ತಾನೆ. ಭಾನುವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಮಳಿಗೆಗೆ ಬಂದ ಇಬ್ಬರು ಆರೋಪಿಗಳು ಉಂಗುರ ಬೇಕಿದೆ ಎಂದು ತಿಳಿಸಿದ್ದಾರೆ. ರಾಹುಲ್ ಉಂಗುರ ತರಲು ಸೇಫ್ ಲಾಕರ್ ಕೊಠಡಿಗೆ ತೆರಳುತ್ತಿದ್ದಂತೆ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳಿಬ್ಬರು ಚಾಕು ಹಾಗೂ ಪಿಸ್ತೂಲ್ ತೋರಿಸಿ ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ಬಳಿಯಿದ್ದ ಟೇಪ್‌ನಿಂದ ರಾಹುಲ್‌ನ ಎರಡೂ ಕೈಗಳಿಗೂ ಕಟ್ಟಿ ಹಾಕುವ ಮಾದರಿಯಲ್ಲಿಸುತ್ತಿದ್ದಾರೆ. ಜತೆಗೆ, ಆತನ ಬಾಯಿಯನ್ನೂ ಟೇಪ್‌ನಿಂದ ಸುತ್ತಿದ್ದು, ಒಬ್ಟಾತ ಪಿಸ್ತೂಲ್‌ನಿಂದ ಹೆದರಿಸುತ್ತಿದ್ದರೆ ಮತ್ತೂಬ್ಬ ಸೇಫ್ ಲಾಕರ್‌ನಲ್ಲಿದ್ದ ಮೂರು ಕೆ.ಜಿ 450 ಗ್ರಾಂ ಚಿನ್ನದ ಆಭರಣಗಳು,715 ಗ್ರಾಂ ಬೆಳ್ಳಿ ಆಭರಣಗಳು,3.96 ಸಾವಿರ ರೂ. ನಗದು ಹಣವನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದಾನೆ. ಪುನಃ ಇಬ್ಬರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ರಾಹುಲ್ ಕಾಲುಗಳನ್ನು ಆರೋಪಿಗಳು ಕಟ್ಟಿ ಹಾಕಿರಲಿಲ್ಲ. ಹೀಗಾಗಿ ಆರೋಪಿಗಳು ಹೋದ ತಕ್ಷಣ ಹೊರಗೆ ಬಂದಾಗ ಸ್ಥಳೀಯರು ನೆರವಿಗೆ ಬಂದರು ಎಂದು ರಾಹುಲ್ ತಿಳಿಸಿದ್ದಾನೆಂದು ಪೊಲೀಸರು ಹೇಳಿದರು.
ಆರೋಪಿಗಳು ತಿಂಗಳ ಹಿಂದೆಯೇ ಸಂಚು ರೂಪಿಸಿ ದರೋಡೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೋವಿಡ್ ಹಿನ್ನೆಲೆಯಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಸಹ ಧರಿಸಿ ಮಳಿಗೆಗೆ ಬಂದಿರುವುದರಿಂದ ಅವರ ಮುಖಗಳು ಅಸ್ಪಷ್ಟವಾಗಿವೆ. ಮಳಿಗೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಡ್ವಾನ್ಸ್‌ಕೊಟ್ಟು ಹೋಗಿದ್ದ ಆರೋಪಿಗಳು : ಚಿನ್ನಾಭರಣ ದರೋಡೆ ಮಾಡಿರುವ ಇಬ್ಬರು ಆರೋಪಿಗಳು ಆ. 20ರಂದು ಮಳಿಗೆಗೆ ಬಂದು ಚಿನ್ನದ ಸರಬೇಕೆಂದುಕೇಳಿ ಅದನ್ನು ಮಾಡಿಕೊಡಲು ಸಾವಿರ ರೂ. ಅಡ್ವಾನ್ಸ್ ನೀಡಿ ಹೋಗಿದ್ದರು. ಅದರಂತೆ, ಸೆ. 20ರಂದು ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಂದು ಚಿನ್ನದ ಸರ ಕೇಳಿದರು. ಅದನ್ನು ತೋರಿಸುತ್ತಲೇ ಉಂಗುರ ಬೇಕು ಎಂದರು. ಅದನ್ನು ತರಲು ಒಳ ಹೋದಾಗ ಪಿಸ್ತೂಲ್ ತೋರಿಸಿ ಕೊಲ್ಲುವ ಬೆದರಿಕೆ ಹಾಕಿ ಲೂಟಿ ಮಾಡಿದ್ದಾರೆ’ ಎಂದು ರಾಹುಲ್ ಹೇಳಿದ್ದಾರೆ.