Advertisement

ಗೋಲ್ಡ್‌ ಫೈನಾನ್ಸ್‌ನಲ್ಲಿ ಕೋಟಿಗಟ್ಟಲೇ ವಂಚನೆ : ಮಹಿಳಾ ಸಿಬ್ಬಂದಿ ಸೇರಿ ನಾಲ್ವರ ಬಂಧನ

08:50 PM Mar 08, 2022 | Team Udayavani |

ಬೆಂಗಳೂರು: ನಗರದ ಗೋಲ್ಡ್‌ ಫೈನಾನ್ಸ್‌ವೊಂದರಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆಸಿದ ಸಂಬಂಧ, ಶಾಖೆಯ ಮಹಿಳಾ ಸಿಬ್ಬಂದಿ ಸೇರಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

Advertisement

ಮೋನಿಷಾ(32), ಶಂಕರ್‌(40), ಶಿವಕುಮಾರ್‌(36) ಮತ್ತು ಅಮರನಾಥ್‌(39) ಬಂಧಿತರು. ಆರೋಪಿಗಳ ವಿರುದ್ಧ ಗೋಲ್ಡ್‌ ಫೈನಾನ್ಸ್‌ ಕಚೇರಿಯ ಹಿರಿಯ ಅಧಿಕಾರಿ ಕಲಾವತಿ ಎಂಬವರು ದೂರು ನೀಡಿದ್ದರು. ಆರೋಪಿಗಳು ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನವನ್ನು, ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಬೇರೆಡೆ ಹೆಚ್ಚಿನ ಬಡ್ಡಿಗೆ ಅಡವಿಟ್ಟು ಹಣ ಗಳಿಸುತ್ತಿದ್ದರು. ಅಲ್ಲದೇ ಹರಾಜಿಗೆ ಬಂದ ಚಿನ್ನದಲ್ಲೂ ಮೋಸ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.

ಇನ್ನು ಫೈನಾನ್ಸ್‌ನಲ್ಲಿ ಆಡಿಟ್‌ ಮಾಡುವಾಗ ಉದ್ದೇಶಪೂರ್ವಕವಾಗಿ ವಿದ್ಯುತ್‌ ಕಡಿತಗೊಳಿಸಿ ಗಮನ ಬೇರೆಡೆ ಸೆಳೆಯುತ್ತಿದ್ದರು.ಆದರೂ ಇತ್ತೀಚೆಗೆ ಆಡಿಟ್‌ ಮಾಡುವಾಗ ಎರಡು ಕೋಟಿ ರೂ. ಅವ್ಯವಹಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ರಷ್ಯಾದ ಮೇಲೆ ಹೇರಿರುವ ನಿರ್ಬಂಧ ಎಲ್ಲಾ ಕಡೆಗಳಿಗೆ ಹಾನಿಕಾರಕ: ಚೀನಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next