Advertisement
ಕಳೆದ ಚುನಾವಣೆ ಅನಂತರ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ರಮೇಶ ಜಾರಕಿಹೊಳಿ ಒಮ್ಮೆಲೇ ರಾಷ್ಟ್ರ ರಾಜ ಕಾರಣಿಗಳು ತಮ್ಮ ಕಡೆ ತಿರುಗಿ ನೋಡುವಂತೆ ಮಾಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನ ಮಾಡುವುದಾಗಿ ಪಣ ತೊಟ್ಟ ರಮೇಶ ತಮ್ಮ ಹಠದಲ್ಲಿ ಯಶಸ್ವಿಯಾದರು. ಆಗಿನಿಂದ ಗೋಕಾಕ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿತು.
Related Articles
Advertisement
ಸಹೋದರರ ಪ್ರಚಾರದ ಕುತೂಹಲ: ವಿಧಾನ ಪರಿಷತ್ ಸದಸ್ಯ, ಸಹೋದರ ಲಖನ್ ಜಾರಕಿಹೊಳಿ ರಮೇಶ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ಮತ್ತೊಬ್ಬ ಸಹೋದರ ಸತೀಶ ಈ ಬಾರಿಯೂ ರಮೇಶ ವಿರುದ್ಧ ಪ್ರಚಾರ ಕಣಕ್ಕೆ ಇಳಿದಿದ್ದಾರೆ. ಬಾಲಚಂದ್ರ ಮತ್ತು ಲಖನ್ ಅವರು ರಮೇಶ ಪರ ಪ್ರಚಾರ ನಡೆಸಲಿದ್ದಾರೆ. ಈ ಸಹೋದರರ ಪ್ರಚಾರ ಪೈಪೋಟಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಈ ಬಾರಿ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಮೀಸಲಾತಿ ಹೋರಾಟಗಾರರು ಬಿಜೆಪಿ ಹಿಡಿತವಿರುವ ಕ್ಷೇತ್ರ ಗಳಲ್ಲಿಯೇ ಸಮಾವೇಶಗಳನ್ನು ಮಾಡುವ ಮೂಲಕ ರಮೇಶ ಜಾರಕಿಹೊಳಿ ಹಿಡಿತವನ್ನು ಬೇಸೆಯುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇದರ ಲಾಭ ತಮಗೆ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಅಶೋಕ ಪೂಜಾರಿಗೆ ಸ್ವಪಕ್ಷೀಯರ ಕಾಟರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿ ಯಾರು ಎಂಬ ಚರ್ಚೆ ನಡೆದಿರುವಾಗಲೇ ಈ ಪಕ್ಷದಲ್ಲಿ ಕೆಲ ಕಾರ್ಯಕರ್ತರು ಮೂಡಿಸುತ್ತಿರುವ ಗೊಂದಲ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಟಿಕೆಟ್ ಖಚಿತಪಡಿಸಿಕೊಂಡೇ ಕಾಂಗ್ರೆಸ್ ಸೇರ್ಪಡೆಯಾಗಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿರುವ ಅಶೋಕ ಪೂಜಾರಿ ವಿರುದ್ಧ ಕಾಂಗ್ರೆಸ್‌ನ ಕೆಲವು ಅತೃಪ್ತರು ಚುನಾವಣೆಗೆ ಮೊದಲೇ ಪೂಜಾರಿ ಅವರಿಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅವರ ವಿರುದ್ಧ ಪ್ರಚಾರ ನಡೆಸಿದ್ದಾರೆ. ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕ್ಷೇತ್ರದ ಉಸ್ತುವಾರಿ ತೆಗೆದುಕೊಂಡಿರುವ ಸತೀಶ ಜಾರಕಿಹೊಳಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. -ಕೇಶವ ಆದಿ