Advertisement

ದೇವರ ಮುಕುಟ ಕದ್ದಿದ್ದ ಆರೋಪಿ ಸೆರೆ

10:55 AM Jul 09, 2023 | Team Udayavani |

ಬೆಂಗಳೂರು: ವಿವಿ ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ನಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಒಂದೂವರೆ ಕೆ.ಜಿ. ತೂಕದ ದೇವರ ಮುಕುಟ ಕದ್ದಿದ್ದ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ವಿವಿ ಪುರದ ರವಿನಾಯ್ಡು ಅಲಿಯಾಸ್‌ ರಾಮ್‌ ಬಹದ್ದೂರ್‌ ನಾಯ್ದು ಬಂಧಿತ.

Advertisement

ಜೂ.28ರಂದು ರಾತ್ರಿ 9 ಗಂಟೆಗೆ ರವಿನಾಯ್ಡು ವಿವಿ ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ನಲ್ಲಿರುವ ಕನ್ಯಕಾಪರಮೇಶ್ವರಿ ದೇವಾಲಯಕ್ಕೆ ಕಾವಿ ಬಟ್ಟೆ ಧರಿಸಿ, ಕೈಯಲ್ಲಿ ಜೋಳಿಗೆ ಚೀಲ ಹಿಡಿದುಕೊಂಡು ತಲೆಯಲ್ಲಿ ಟೋಪಿ ಹಾಕಿ ಬಂದಿದ್ದ. ನಂತರ ದೇವಸ್ಥಾನದಲ್ಲಿನ ಒಂದೂವರೆ ಕೆ.ಜಿ. ತೂಕದ ದೇವರ ಬೆಳ್ಳಿ ಮುಕುಟವನ್ನೇ ಜೋಳಿಗೆಗೆ ತುಂಬಿಸಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ವಿವಿ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ದೇವಾಲಯದ ಸುತ್ತ-ಮುತ್ತಲಿರುವ 100ಕ್ಕೂ ಅಧಿಕ ಸಿಸಿ ಕ್ಯಾಮೆರಾ ಪರಿಶೀಲಿಸಿದಾ ರವಿ ನಾಯ್ಡು ಸುಳಿವು ಸಿಕ್ಕಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೇವರ ಮುಕುಟ ಕದ್ದಿದ್ದ ಸಂಗತಿ ತಿಳಿಸಿದ್ದ.

ಏಡ್ಸ್‌ ಜಾಗೃತಿ ಮೂಡಿಸಿದ್ದ ಆರೋಪಿ: 2000 ದಿಂದ 2006ರವರೆಗೂ ಏಡ್ಸ್‌ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್‌ನಲ್ಲೇ ದೇಶಾದ್ಯಂತ ಸುತ್ತಾಟ ನಡೆಸಿದ್ದ. ಭಷ್ಟಾಚಾರ ತಡೆಗೂ ಸೈಕಲ್‌ ನಲ್ಲೇ ಅಭಿಯಾನ ನಡೆಸಿದ್ದ. ದೇಶದ ಹಲವು ಗಣ್ಯರು ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿದ್ದರು. ಇದಾದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಒಳ ಗಾದ ರವಿನಾಯ್ಡು ಚಿಂದಿ ಆಯುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದ. ಆರ್ಥಿ ಕವಾಗಿ ಸಂಕಷ್ಟಕ್ಕೀಡಾದ ಹಿನ್ನೆಲೆಯಲ್ಲಿ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ದೇವರ ಮುಕುಟ ಕದಿಯಲು ಸಂಚು ರೂಪಿಸಿ ಕೃತ್ಯ ಎಸಗಿದ್ದ. ಜೈಲು ಸೇರಿದ ಬಳಿಕ ಹೊರ ಬಂದ ರವಿನಾಯ್ಡುಗೆ ವಿವಿ ಪುರ ಪೊಲೀಸ್‌ ಠಾಣೆಯಲ್ಲೇ ಕೆಲಸ ನೀಡಿ ಊಟ, ವಸತಿ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next