ವಿಜಯಪುರ: ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿ 111 ವರ್ಷ ಬದುಕಿದ ಸಿದ್ಧಗಂಗಾ ಡಾ| ಶಿವಕುಮಾರ ಶ್ರೀಗಳು ಪ್ರಪಂಚದ ಅಚ್ಚರಿ ಎನಿಸಿದ್ದರು. ಧೀರ್ಘಾಯುಷಿಗಳಾಗಿ ಬದುಕಿದ ವಿಶ್ವದ 10 ಜನರಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ನಾಡಿಗೂ ಕೀರ್ತಿ ತಂದಿದ್ದರು. ದೀರ್ಘಾಯುಷ್ಯ ಹೊಂದಿದ್ದ ಶ್ರೀಗಳ ಆರೋಗ್ಯದ ವಿಷಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ಮಯ ಮೂಡಿತ್ತು ಎಂದು ಬಿಎಲ್‌ಡಿಇ ವಿವಿ ಕುಲಪತಿ ಡಾ| ಎಂ.ಎಸ್. ಬಿರಾದಾರ ಅಭಿಪ್ರಾಯಪಟ್ಟರು.
ಮಂಗಳವಾರ ನರಗದ ಬಿಎಲ್‌ಡಿಇ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆದ ಡಾ| ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಕಲ್ಯಾಣ ಕಾರ್ಯ ಮಾಡಿದ ಸಿದ್ಧಗಂಗಾ ಮಹಾಸ್ವಾಮಿಗಳು ಜನಮಾನಸದಲ್ಲಿ ಬೆಳಕು ಚೆಲ್ಲಿದವರು. ಸುದೀರ್ಘ ಕಾಲ ಬದುಕಲು ಅನುವಂಶಿಯತೆ, ಹಿತ-ಮಿತ ಆಹಾರ ಸೇವನೆ, ನಿರಂತರ ಕಾಯಕ ನಿಷ್ಠೆ, ಬಸವಾದಿ ಶರಣರ ತತ್ವಾದರ್ಶಗಳ ಪಾಲನೆ ಪ್ರಮುಖ ಕಾರಣ ಎಂದು ವಿವರಿಸಿದರು.
ಬಿಎಲ್‌ಡಿಇ ಸಂಸ್ಥೆ ಪ್ರಚಾರಾಧಿಕಾರಿ ಡಾ| ಮಹಾಂತೇಶ ಬಿರಾದಾರ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಆಡಳಿತಾಧಿಕಾರಿ ಡಾ| ಅಜಾತಸ್ವಾಮಿ, ಡಾ| ಆರ್.ಕೆ. ಕುಲಕರ್ಣಿ ಮಾತನಾಡಿದರು.
ಮೇಲ್ಮನೆ ಸದಸ್ಯರೂ ಆಗಿರುವ ಬಿಎಲ್‌ಡಿಇ ನಿರ್ದೇಶಕ ಸುನೀಲಗೌಡ ಪಾಟೀಲ, ಡಾ| ವಿ.ಪಿ. ಹುಗ್ಗಿ, ಆಡಳಿತಾಧಿಕಾರಿ ಡಾ| ಆರ್.ವಿ. ಕುಲಕರ್ಣಿ, ಬಿ.ಆರ್. ಪಾಟೀಲ, ಬಿಎಲ್‌ಡಿಇ ವಿಶ್ವವಿದ್ಯಾಲಯ ಅಧೀಕ್ಷಕ ಡಾ| ವಿಜಯ ವಾರದ, ಡಾ| ಎಂ.ಎಸ್. ಮದಭಾವಿ, ಡಾ| ವಿ.ಡಿ. ಐಹೊಳ್ಳಿ, ಪ್ರೊ| ಎ.ಬಿ. ಬೂದಿಹಾಳ, ಜಂಬುನಾಥ ಕಂಚ್ಯಾಣಿ, ಡಾ| ಎಂ.ಎಸ್. ಹಿರೇಮಠ, ಜೆ.ಎಸ್. ಗೌಡರ, ಡಾ| ಗುಗ್ಗರಿಗೌಡರ, ಗಣ್ಣೂರ ದಂಪತಿ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಸುರೇಶ ಗೊಣಸಗಿ, ಡಾ| ಬಾಗಾಯತ, ದಶರಥ ತಾವಂಸೆ, ಬಿಎಲ್‌ಡಿಇ ಸಂಸ್ಥೆ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇದ್ದರು.