Advertisement

ತರಬೇತಿ ನೆಪದಲ್ಲಿ ಶಿಷ್ಯೆಯನ್ನು ರೇಪ್ ಮಾಡಿದ ಯೋಗ ಗುರು!

01:15 PM Feb 08, 2017 | Sharanya Alva |

ಮಾಪುಸಾ(ಗೋವಾ):ತಾಂತ್ರಿಕ ಮಸಾಜ್ ಮಾಡುವುದಾಗಿ ನಂಬಿಸಿ ಅಮೆರಿಕ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಯೋಗ ಗುರುವನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಗೋವಾದ ಪೆರ್ನೆಮ್ ಕರಾವಳಿ ಪ್ರದೇಶದ ಕೋರ್ಗಾವೊ ಗ್ರಾಮದಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಪ್ರತೀಕ್ ಕುಮಾರ್ ಅಗರ್ ವಾಲ್ (38) ಎಂಬ ಯೋಗ ಗುರು, ಫೆಬ್ರುವರಿ 2ರಂದು ಕೋರ್ಗಾವೊ ಗ್ರಾಮದಲ್ಲಿ ತಾಂತ್ರಿಕ್ ಮಸಾಜ್ ಮಾಡುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಮೆರಿಕ ಮೂಲದ ಮಹಿಳೆ ಮಂಗಳವಾರ ಪೆರ್ನೆಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಮೇಲೆ ಅತ್ಯಾಚಾರ ನಡೆಸಿ, ಲೈಂಗಿಕ ಕಿರುಕುಳ ನೀಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಯೋಗ ಗುರು ಕೆನಡಾ ದೇಶದ ಪ್ರಜೆಯೊಬ್ಬಳ ಮೇಲೂ ಅತ್ಯಾಚಾರ ನಡೆಸಿರುವುದಾಗಿಯೂ ಆರೋಪಿಸಿದ್ದಾಳೆ ಎಂದು ವರದಿ ವಿವರಿಸಿದೆ.

7 ದಿನಗಳ ಯೋಗ ಶಿಕ್ಷಕ ತರಬೇತಿಗಾಗಿ ಅಮೆರಿಕದಿಂದ ಹೆಸರು ನೋಂದಾಯಿಸಿಕೊಂಡಿದ್ದ ಈಕೆ ಜನವರಿ 31ರಂದು ಗೋವಾಕ್ಕೆ ಆಗಮಿಸಿದ್ದರು. ಯೋಗ ಶಿಕ್ಷಕ ತರಬೇತಿಗಾಗಿ ಪ್ರತೀಕ್ ವೆಬ್ ಸೈಟ್ ವೊಂದರಲ್ಲಿ ಜಾಹೀರಾತು ನೀಡಿದ್ದ. ಈ 7 ದಿನಗಳ ತರಬೇತಿಗಾಗಿ ಆನ್ ಲೈನ್ ನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಹಾಗಾಗಿ ಬೇರೆ, ಬೇರೆ ದೇಶಗಳ 7 ಮಂದಿ ಮಹಿಳೆಯರು ಗೋವಾಕ್ಕೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next