Advertisement

ಗೋವಾದ ನೀರು ಕೊಲ್ಲಿ ರಾಷ್ಟ್ರಗಳಿಗೆ ಕೊಂಡೊಯ್ಯಲು ಸಾಧ್ಯ : ಸಚಿವ ರವಿ

01:26 PM Apr 08, 2022 | Team Udayavani |

ಪಣಜಿ: ಸಚಿವ ರವಿ ನಾಯ್ಕ ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ, ಇದೀಗ ಮತ್ತೊಂದು ಹೇಳಿಕೆ ನೀಡಿ ಚರ್ಚೆಗೆ ಕಾರಣವಾಗಿದ್ದಾರೆ. ಗೋವಾದಲ್ಲಿ ನೀರು ಸಂಗ್ರಹಿಸಿ ಕೊಲ್ಲಿ ರಾಷ್ಟ್ರಗಳಿಗೆ ಕೊಂಡೊಯ್ಯಲು ಸಾಧ್ಯ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಗೋವಾದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರಿನ ಕೊರತೆಯಿರುವ ಸ್ಥಳಗಳಿಗೆ ನೀರು ಪೂರೈಸಲು ಸಾಧ್ಯ. ಗೋವಾದಲ್ಲಿ ಸಂಗ್ರಹವಾಗಿರುವ ನೀರನ್ನು ನೇರವಾಗಿ ಕೊಲ್ಲಿ ರಾಷ್ಟ್ರಗಳಿಗೆ ಕೊಂಡೊಯ್ಯಲು ಸಾಧ್ಯವಿದೆ ಎಂದು ರವಿ ನಾಯ್ಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರವಿ ನಾಯ್ಕ ಕೃಷಿ ಸಚಿವರಾಗಿದ್ದು, ಅಧಿಕಾರ ಸ್ವೀಕರಿಸಿದ ನಂತರ ಅವರು ನೀಡಿದ ಮೊದಲ ಹೇಳಿಕೆ ಇದಾಗಿದೆ.

ನನ್ನ ಯೋಜನೆಗಳನ್ನು ತಿಳಿದುಕೊಳ್ಳಲು ನೀವು ಏಕೆ ಆತುರಪಡುತ್ತೀರಿ ಎಂದು ಸುದ್ಧಿಗಾರರನ್ನು ಪ್ರಶ್ನಿಸಿ, ಗೋವಾ ರಾಜ್ಯದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದ ಹಲವೆಡೆ ಸದ್ಯ ಪ್ರತಿದಿನ ಎರಡರಿಂದ ನಾಲ್ಕು ಗಂಟೆಗಳು ಮಾತ್ರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ. ಇನ್ನು ಮುಂದೆ ಗೋವಾದಿಂದ ನೀರನ್ನು ರಫ್ತು ಮಾಡುವುದಾಗಿ ಹೇಳಿದ್ದಾರೆ.

ರವಿ ನಾಯ್ಕರವರು ಗೋವಾ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‍ ತೊರೆದು ಬಿಜೆಪಿ ಸೇರಿದ್ದರು. ಪೊಂಡಾ ಕ್ಷೇತ್ರದಲ್ಲಿ 77 ಮತಗಳಿಂದ ಜಯಗಳಿಸಿದ್ದರು. ಸದ್ಯ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸಂಪುಟದಲ್ಲಿ ಕೃಷಿ ಖಾತೆಯೊಂದಿಗೆ ಕರಕುಶಲ ಮತ್ತು ನಾಗರೀಕ ಸರಬರಾಜು ಖಾತೆಯನ್ನು ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next