Advertisement

ಗೋವಾ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಲಿದೆ: ಸಚಿವ ಗಡ್ಕರಿ

11:53 AM Jan 27, 2017 | Team Udayavani |

ಪಣಜಿ : ಗೋವೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪೂರ್ಣಗೊಂಡು ಬಳಕೆಗೆ ಬಂದಾಗ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಇಲ್ಲಿಂದ 40 ಕಿ.ಮೀ. ದೂರದ ಶಿರೋಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಚಿವ ಗಡ್ಕರಿ, “ಇಂದು ಗೋವೆಗೆ ದಿನ ನಿತ್ಯ 91 ವಿಮಾನಗಳು ಬರುತ್ತಿವೆ. ಇನ್ನು ಒಂದೂವರೆ ವರ್ಷದೊಳಗೆ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಕೆ ಬಂದಾಗ ಗೋವೆಗೆ ದಿನನಿತ್ಯ ಸುಮಾರು 250 ವಿಮಾನಗಳು ಬರಲಿವೆ ಮತ್ತು ಆ ಮೂಲಕ ಗೋವೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮೂರು ಪಟ್ಟ ಹೆಚ್ಚಲಿದೆ’ ಎಂದು ಹೇಳಿದರು. 

ಗೋವಾ ಪ್ರಕೃತ ದೇಶದಲ್ಲೇ ಅತ್ಯಂತ ಪ್ರಸಿದ್ಧವೆನಿಸಿರುವ ಬೀಚ್‌ ಮತ್ತು ಅಹೋರಾತ್ರಿ ಪ್ರವಾಸೋದ್ಯಮ ತಾಣಗಳಿಗೆ ಹೆಸರುವಾಸಿಯಾಗಿದ್ದು ದಿನವಹಿ ನಾಲ್ಕು ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next