ಪಣಜಿ : ಪ್ರಸಕ್ತ ವರ್ಷ ಗೋವಾ ರಾಜ್ಯದ ಹತ್ತನೇಯ ತರಗತಿಯ ಪರೀಕ್ಷಾ ಫಲಿತಾಂಶ ಇಂದು (ಸೋಮವಾರ, ಜುಲೈ 12) ಸಂಜೆ ಹೊರಬಿದ್ದಿದ್ದು, ಶೇಕಡಾ 99.72 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಗೋವಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ಮಾಹಿತಿ ನೀಡಿದೆ.
ಈ ಹಿಂದಿನ ವರ್ಷದ ಶೇ 92.69 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : ಅದೊಂದು ಬಣ್ಣಿಸಲಾಗದ ಅನುಭೂತಿ : ಬಾಹ್ಯಾಕಾಶ ಪಯಣದ ಬಗ್ಗೆ ಶಿರಿಷಾ ಮಾತು
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಮಂಡಳಿಯ ಅಧ್ಯಕ್ಷ ಭಗೀರಥ ಶೇಟಯೆ, ಪ್ರಸಕ್ತ ವರ್ಷದ ಹತ್ತನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 23,937 ವಿದ್ಯಾರ್ಥಿಗಳ ಪೈಕಿ 23,900 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷ ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹತ್ತನೇಯ ತರಗತಿಯ ಪರೀಕ್ಷೆಯನ್ನು ರದ್ಧುಗೊಳಿಸಿ ಆಂತರಿಕ ಮೌಲ್ಯಮಾಪನ ಮತ್ತು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲಾಗಿದೆ.
ತಮಗೆ ಲಭಿಸಿದ ಅಂಕಗಳಿಂದ ಸಮಾಧಾನವಾಗದ ವಿದ್ಯಾರ್ಥಿಗಳು ಶಿಕ್ಷಣ ಮಂಡಳಿಯನ್ನು ಸಂಪರ್ಕಿಸಿ ಆಫ್‍ಲೈನ್ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಶೇಟಯೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ದೇಸಿಯ ತಳಿಯ ದನ ಸಾಕಾಣಿಕೆಯಲ್ಲಿ ಲಾಭ ಗಳಿಸುವುದು ಹೇಗೆ?