Advertisement

Goa: ವಿಧಾನಸಭೆಯ ಸಭಾಪತಿ ರಮೇಶ್ ತವಡ್ಕರ್ ಅವರಿಗೆ ಅಮೇರಿಕನ್ ವಿ.ವಿ ಯಿಂದ ಡಾಕ್ಟರೇಟ್ ಪದವಿ

08:06 PM Jan 25, 2024 | Team Udayavani |

ಪಣಜಿ: ಗೋವಾ ರಾಜ್ಯ ವಿಧಾನಸಭೆಯ ಸಭಾಪತಿ ರಮೇಶ್ ತವಡ್ಕರ್ ಅವರಿಗೆ ಅಮೇರಿಕನ್ ವಿಶ್ವವಿದ್ಯಾನಿಲಯವು ಸಾಮಾಜಿಕ ಸೇವೆಗಾಗಿ ಡಾಕ್ಟರೇಟ್ ಪದವಿಯನ್ನು ನೀಡಿದೆ. ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಮಧು ಕೃಷ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

Advertisement

ಸಭಾಪತಿ ರಮೇಶ್ ತವಡ್ಕರ್ ಅವರ ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಮಾಡಿದ ಕೆಲಸವನ್ನು ಅಮೆರಿಕನ್ ವಿಶ್ವವಿದ್ಯಾಲಯ ಗುರುತಿಸಿದೆ. ರಾಜ್ಯದ ಒಬ್ಬ ರಾಜಕಾರಣಿಯೂ ವಿದೇಶಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿಲ್ಲ. ಅವರ ಶ್ರಮಧಾಮ ಯೋಜನೆಯು ವಿದೇಶದಲ್ಲೂ ಸದ್ದು ಮಾಡಲಾರಂಭಿಸಿದೆ ಎಂಬ ಚರ್ಚೆ ಅವರ ಕ್ಷೇತ್ರದ ಕಾರ್ಯಕರ್ತರಲ್ಲಿ ಶುರುವಾಗಿದೆ.

ವಿದ್ಯಾರ್ಥಿ ದಿನಗಳಿಂದಲೂ ಚಳವಳಿಯಲ್ಲಿ ಸಕ್ರಿಯರಾಗಿದ್ದ ರಮೇಶ್ ತವಡ್ಕರ್ ಅವರು ಈ ಹಿಂದೆ ಅತ್ಯುತ್ತಮ ರಾಷ್ಟ್ರೀಯ ಸ್ವಯಂಸೇವಕರಾಗಿ ಪ್ರಶಸ್ತಿ ಪಡೆದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಇವರು ಸಾಕಷ್ಟು ಶ್ರಮವಹಿಸಿ ರಾಜ್ಯದಲ್ಲೇ ಪ್ರಥಮ ವಸತಿ ಶಾಲೆ ಸ್ಥಾಪಿಸಿದರಲ್ಲದೆ ಶಾಲೆಗೆ ಸುಸಜ್ಜಿತ ಕಟ್ಟಡವನ್ನೂ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next