ಪಣಜಿ: ಗೋವಾದ ರಾಜಭವನವನ್ನು ಮಾಹಿತಿ ಹಕ್ಕು ಖಾಯ್ದೆಯ ಅಡಿಯಲ್ಲಿ ತರಲಾಗುವುದು ಎಂದು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ರವರು ಹೇಳಿದ್ದಾರೆ.
ವಕೀಲ ಐರೀಶ್ ರೋಡ್ರಿಗಸ್ ಆರ್ ಟಿಐ ಖಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರು ಮುಖ್ಯಮಂತ್ರಿಗಳ ಕೆಲ ತಪ್ಪು ನಿರ್ಣಯಗಳ ಕುರಿತಂತೆ ಪ್ರಧಾನಿ ಹಾಗೂ ಗೃಹಮಂತ್ರಿಗಳೊಂದಿಗೆ ನಡೆಸಿರುವ ಪತ್ರ ವ್ಯವಹಾರದ ಮಾಹಿತಿಯನ್ನು ಕೋರಿ ವಕೀಲ ಐರೀಶ್ ರೋಡ್ರಿಗಸ್ ರವರು ಮಾಹಿತಿ ಆಯೋಗ ಮತ್ತು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ದೇಶದಲ್ಲಿನ ಎಲ್ಲ ರಾಜಭವನ ಆರ್ ಟಿಐ ಖಾಯ್ದೆಯ ಅಡಿಯಲ್ಲಿ ಬರುವಾಗ ಗೋವಾದ ರಾಜಭವನವನ್ನು ಮಾತ್ರ ಇದರಿಂದ ದೂರವಿಡಲಾಗಿದೆ. ಗೋವಾ ರಾಜಭವನದ ಎಲ್ಲ ವ್ಯವಹಾರಗಳು ಬಹಿರಂಗವಾಗುತ್ತದೆ ಎಂದು ಆರ್ ಟಿಐ ಖಾಯ್ದೆಯ ಅಡಿಯಲ್ಲಿ ಕೇಳಿರುವ ಮಾಹಿತಿಯನ್ನು ನೀಡಲಾಗುತ್ತಿಲ್ಲ. ವಕೀಯ ಐರೀಶ್ ರೋಡ್ರಿಗಸ್ ರವರು ಈ ಕುರಿತು ಮಾಹಿತಿ ಆಯೋಗ ಮತ್ತು ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ತೀರ್ಪು ತಮ್ಮ ಪರವಾಗಿ ಬರದ ಕಾರಣ ನಂತರ ಅವರು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕಿಷ್ಕಿಂದಾ ಅಂಜನಾದ್ರಿಗೆ ಫ್ರಾನ್ಸ್ ರಾಯಭಾರಿ ಭೇಟಿ
ಇನ್ನು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ರವರು ರಾಜಭವನದ ಎಲ್ಲ ವ್ಯವಹಾರವನ್ನೂ ಪಾರದರ್ಶಕವಾಗಿಡಲು ಗೋವಾ ರಾಜಭವನವನ್ನು ಆರ್ ಟಿಐ ಖಾಯ್ದೆಯ ಅಡಿಯಲ್ಲಿ ತರುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದರು. ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರು ನವೆಂಬರ್ 3, 2019 ರಿಂದ ಅಗಸ್ಟ್ 18, 2020 ರ ವರೆಗೆ ಅಧಿಕಾರದಲ್ಲಿದ್ದರು. ಆದರೆ ಇವರನ್ನು ಇದ್ದಕ್ಕಿದ್ದಂತೆಯೇ ಬದಲಾವಣೆ ಮಾಡಲಾಗಿತ್ತು.