Advertisement

ಗೋವಾದಲ್ಲಿ “ಎಣ್ಣೆ ‘ಬೆಲೆ ಏರಿಕೆ!

03:50 AM Mar 25, 2017 | |

ಪಣಜಿ: ಬಿಯರ್‌ ಕುಡಿದು ಮೋಜು- ಮಸ್ತಿ ಮಾಡಲೆಂದು ಗೋವಾಕ್ಕೆ ತೆರಳುವ  ಪ್ರವಾಸಿಗರಿಗೆ ಕೊಂಚ ಕಹಿ ಸುದ್ದಿ.  ಕಿಕ್‌ ಏರಿಸಬೇಕಾದ ಅಲ್ಲಿನ ಬಿಯರ್‌ನ ಬೆಲೆಯೇ ಈಗ “ಕಿಕ್‌’ ಪಡೆದಿದೆ! 

Advertisement

ಗೋವಾದಲ್ಲಿ ಉತ್ಪಾದನೆ ಆಗುವ, ಮಾರಲ್ಪಡುವ ಬಿಯರ್‌ ಬೆಲೆಯನ್ನು ಸಿಎಂ ಮನೋಹರ ಪಾರೀಕರ್‌ ರಾಜ್ಯ ಬಜೆಟ್‌ನಲ್ಲಿ ಏರಿಸಿದ್ದಾರೆ. ಆಮದಾಗುವ ಮದ್ಯ ಪೇಯಗಳಿಗೆ ವಾರ್ಷಿಕವಾಗಿ 1 ಲಕ್ಷ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಮದ್ಯವನ್ನೇ ನಂಬಿ ಗೋವಾಕ್ಕೆ ಹೋಗುವ ಮಂದಿಗೆ ಅದರ ಬೆಲೆಯೇ ಇನ್ನು ಕಿಕ್‌ ಏರಿಸಲಿದೆ.

ಪೆಟ್ರೋಲ್‌ ಮೇಲಿನ ಮೌಲ್ಯವರ್ಧಿತ  ತೆರಿಗೆ (ವ್ಯಾಟ್‌) ಶೇ.15 ಹೆಚ್ಚಿಸಲಾಗಿದೆ. ಅಲ್ಲಿ ಪೆಟ್ರೋಲ್‌ ಕೂಡ ಇನ್ನು ತುಟ್ಟಿ. 5 ವರ್ಷಗಳಲ್ಲಿ ವ್ಯಾಟ್‌ ಇಳಿಸುತ್ತಾ ಬಂದ ಹಿನ್ನೆಲೆಯಲ್ಲಿ, ಪೆಟ್ರೋಲ್‌ ದರ ಲೀ.ಗೆ 60 ರೂ. ದಾಟಿರಲಿಲ್ಲ. ಆದರೆ, ಈ ಬಾರಿ ವ್ಯಾಟ್‌ ಅನ್ನು ಶೇ.15 ಹೆಚ್ಚಿಸಲಾಗಿದೆ. ಆದರೂ, ನೆರೆಯ ಕರ್ನಾಟಕ (ಲೀ.ಗೆ 72 ರೂ.), ಮಹಾರಾಷ್ಟ್ರ (ಲೀ.ಗೆ. 76)ಕ್ಕೆ ಹೋಲಿಸಿದರೆ ಗೋವಾದಲ್ಲಿನ ದರ ಕಡಿಮೆಯೇ (65 ರೂ.) ಇರಲಿದೆ. ಪ್ರವಾಸಿ ತಾಣಗಳಲ್ಲಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ 150 ಕೋಟಿ ಮೀಸಲಿಡಲಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಗೋವಾ ಪ್ರವೇಶಿಸುವ ವಾಹನ ಶುಲ್ಕ ರದ್ದು ಮಾಡುವ ಭರವಸೆ ಸಿಎಂ ನೀಡಿದ್ದಾರೆ. 

ಬಜೆಟ್‌ ಮುಖ್ಯಾಂಶ
ರಾಜ್ಯದಲ್ಲಿ ಬಿಯರ್‌ ಕೂಡ ತುಟ್ಟಿ 
ಪೆಟ್ರೋಲ್‌ ದರದ ಮೇಲಿನ ವ್ಯಾಟ್‌ ಶೇ.15 ಹೆಚ್ಚಳ
ಜಿಎಸ್‌ಟಿ ಜಾರಿಯಾದ ನಂತರ ಗಡಿಗಳಲ್ಲಿ ವಾಹನ ಪ್ರವೇಶ ಶುಲ್ಕ ರದ್ದು
2020ರ ವೇಳೆಗೆ ಗೋವಾವನ್ನು ತ್ಯಾಜ್ಯಮುಕ್ತ ರಾಜ್ಯವಾಗಿ ಮಾರ್ಪಡಿಸುವ ಗುರಿ
ಭಾರತದ ಮೊದಲ ಭಿಕ್ಷುಕಮುಕ್ತ ರಾಜ್ಯವಾಗಿಸುವ ಗುರಿ
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಒದಗಿಸಲು 5×0 ಕೋಟಿ ರೂ. ಮೀಸಲು

Advertisement

Udayavani is now on Telegram. Click here to join our channel and stay updated with the latest news.

Next