Advertisement

ಪ್ರಮೋದ್ ಸಾವಂತ್ ಸರ್ಕಾರ ರಾಜ್ಯವನ್ನು “ಅಪರಾಧಗಳ ಸ್ಥಳ”ವನ್ನಾಗಿ ಮಾಡಿದೆ: ದಿಗಂಬರ್ ಕಾಮತ್

01:47 PM Aug 29, 2021 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆಯ ಮನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪ್ರತಿದಿನ ಅತ್ಯಾಚಾರ, ಅಪಹರಣ, ಗ್ಯಾಂಗ್‍ವಾರ್ ಇಂತಹ ಪ್ರಕರಣಗಳು ನಡೆಯುತ್ತಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ಗೋವಾ ರಾಜ್ಯವನ್ನು “ಅಪರಾಧಗಳ ಸ್ಥಳ”ವನ್ನಾಗಿ ಮಾಡಿದೆ. ಇದರಿಂದಾಗಿ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿರುವ ಯಾವುದೇ ಯೋಗ್ಯತೆಯಿಲ್ಲ ಎಂದು ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ದಕ್ಷಿಣ ಗೋವಾ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ದಿಗಂಬರ್ ಕಾಮತ್ ಮನವಿ ಮಾಡಿದರು.

ಇದನ್ನೂ ಓದಿ:ಸಿಂದಗಿ ಅಪ್ರಾಪ್ತೆ ಅತ್ಯಾಚಾರ ಆರೋಪಿ ಸಾವಿನ ಪ್ರಕರಣ: ಸಿಐಡಿ ತನಿಖೆಗೆ ಶಿಫಾರಸು

ಬಾಣಾವಲಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಈ ಘಟನೆಗೆ ಪಾಲಕರನ್ನೇ ಹೊಣೆಯಾಗಿಸಿದ್ದರು. ಆದರೆ ಉತ್ತರ ಗೋವಾದಲ್ಲಿ ನಡೆದ ಸಂಶಯಾಸ್ಪದ ಮೃತ್ಯು ಅತ್ಯಾಚಾರ ಘಟನೆ ಅಪಹರಣ ಪ್ರಯತ್ನ ಇದಕ್ಕೆ ಯಾರ ಮೇಲೆ ದೋಷಾರೋಪ ಮಾಡಲಿದ್ದಾರೆ ಎಂದು ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಪ್ರಶ್ನಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ನಾಯಕರಾದ ಸುಭಾಷ ಫಳದೇಸಾಯಿ, ದಕ್ಷಿಣ ಗೋವಾ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಜೋ ಡಾಯಸ್ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next