Advertisement

ಹುಬ್ಬಳ್ಳಿಯಿಂದ ಗೋವಾ-ಕೊಚ್ಚಿ  ವಿಮಾನಯಾನ ಶುಭಾರಂಭ

04:40 PM Jun 29, 2018 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಗೋವಾ ಹಾಗೂ ಕೊಚ್ಚಿಗೆ ಇಂಡಿಗೋ ವಿಮಾನಯಾನ ಸಂಚಾರ ಗುರುವಾರದಿಂದ ಆರಂಭಗೊಂಡಿತು. ಇಂಡಿಗೋ ಕಂಪನಿಯ ಎಟಿಆರ್‌ ವಿಮಾನ ಸಂಜೆ 4:00 ಗಂಟೆಗೆ ಕೊಚ್ಚಿಯಿಂದ ಹುಬ್ಬಳ್ಳಿಗೆ ಆಗಮಿಸಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದವರು ಜಲಫಿರಂಗಿ (ವಾಟರ್‌ ಸಲ್ಯೂಟ್‌) ಮೂಲಕ ವಿಮಾನವನ್ನು ಸ್ವಾಗತಿಸಿದರು. ಇಂಡಿಗೋ ಕಂಪನಿಯ ಸಿಬ್ಬಂದಿ ಕೊಚ್ಚಿಯಿಂದ ಆಗಮಿಸಿದ ಪ್ರಯಾಣಿಕರಿಗೆ ಹೂ-ಗು ಫಿರಂಗಿಚ್ಛ ನೀಡಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ನಿಲ್ದಾಣದಲ್ಲಿ ಮಗುವಿನಿಂದ ಕೇಕ್‌ ಕತ್ತರಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಕಂಪನಿಯ ವಿಮಾನಯಾನ ಸೇವೆ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಹಾಲಪ್ಪ ಆಚಾರಿ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ, ಜಿಲ್ಲಾಧಿಕಾರಿ ಡಾ| ಎಸ್‌. ಬಿ. ಬೊಮ್ಮನಹಳ್ಳಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಡಿಸಿಪಿ ಎಸ್‌.ಬಿ. ನೇಮಗೌಡ ಹಾಗೂ ಇಂಡಿಗೋ ಕಂಪನಿ ಉಪಾಧ್ಯಕ್ಷೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಕಂಪನಿ ಆರಂಭಿಸಿದ ಮೊದಲ ದಿನದ ವಿಮಾನ ಸೇವೆಯಲ್ಲಿ ಗೋವಾಕ್ಕೆ ತೆರಳುತ್ತಿದ್ದ ಪ್ರಯಾಣಿಕರಿಗೆ ಕಂಪನಿಯವರು ಧಾರವಾಡ ಪೇಡೆಯ ಗಿಫ್ಟ್‌ ಹ್ಯಾಂಪರ್‌ ಕೊಟ್ಟು ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next