Advertisement

Goa 2047 ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಜ್ಯ: ಓಂ ಬಿರ್ಲಾ

04:21 PM Jun 15, 2023 | Team Udayavani |

ಪಣಜಿ: ವಿಧಾನಸಭೆ ಚಿಕ್ಕದಾದರೂ ಜನರ ನಿರೀಕ್ಷೆ ಹೆಚ್ಚಿರುತ್ತದೆ, ಬಜೆಟ್‍ನಲ್ಲಿ ಆದ್ಯತೆಗಳಿಗೆ ಆದ್ಯತೆ ನೀಡುವ ಮೂಲಕ ಜನರ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಈಡೇರಿಸಿದರೆ,  . 2047 ರ ಹೊತ್ತಿಗೆ ಗೋವಾ ಅಭಿವೃದ್ಧಿ ಹೊಂದಿ ಭಾರತದ ಕನಸನ್ನು ಈಡೇರಿಸಿದ ಮೊದಲ ರಾಜ್ಯವಾಗುತ್ತದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಗೋವಾ ವಿಧಾನಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Advertisement

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು “ಅಭಿವೃದ್ಧಿ ಹೊಂದಿದ ಭಾರತ 2047 ಮತ್ತು ಚುನಾಯಿತ ಪ್ರತಿನಿಧಿಗಳ ಪಾತ್ರ” ಎಂಬ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸ್ಪೀಕರ್ ರಮೇಶ್ ತವಡ್ಕರ್, ಉಪಸಭಾಪತಿ ಜೋಶುವಾ ಡಿಸೋಜಾ, ಮಾಜಿ ಸಚಿವರು, ಶಾಸಕರು ಉಪಸ್ಥಿತರಿದ್ದರು.

ವಿಧಾನಸಭೆಯ ಸಭಾಪತಿ ರಮೇಶ್ ತವಡಕರ್ ಮಾತನಾಡಿ “ನಾವು ‘ಆತ್ಮನಿರ್ಭರ್ ಭಾರತ್’ ಮತ್ತು ‘ಸ್ವಯಂಪೂರ್ಣ ಗೋವಾ’ ಎರಡನ್ನೂ ಸಾಧಿಸಲು ಬಯಸುತ್ತೇವೆ. ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ನಾನು ಸಾರ್ವಜನಿಕ ಸೇವೆಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಶ್ರಮ-ಧಾಮ್ ಯೋಜನೆಯ ಮೂಲಕ ನಾನು ಹೊಂದಿದ್ದ ಮಹತ್ವಾಕಾಂಕ್ಷೆಯ ಕನಸು ಈಗ ಈಡೇರುತ್ತಿದೆ, ನಾನು ಕೆಲಸಕ್ಕೆ ಬದ್ಧನಾಗಿದ್ದೇನೆ. ದೇಶದ ಅಭಿವೃದ್ಧಿಯೇ ಕೇಂದ್ರ ಮತ್ತು ರಾಜ್ಯದ ಗುರಿಯಾಗಿದೆ ಎಂದರು.

ಗೋವಾದ ಪರವಾಗಿ ಮುಖ್ಯಮಂತ್ರಿ ಸಾವಂತ್ ಬಿರ್ಲಾ ಅವರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next