ಸಾಗರ: ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹದಾಯಿ ನೀರಿಗಾಗಿ ಬಿಜೆಪಿ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಸಿಎಂ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್ ಅಧ್ಯಕ್ಷರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಲು ಕುಮ್ಮಕ್ಕು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಅಮಿಷ್ ಶಾ ಅವರ ಸಮ್ಮುಖದಲ್ಲಿ ಗೋವಾದ ಸಿಎಂ ಮನೋಹರ್ ಪರ್ರಿಕರ್ ಎದುರು ಉತ್ತರ ಕರ್ನಾಟಕದ ಜನರಿಗೆ ಬೇಕಾದ 7.6 ಟಿಎಂಸಿ ಕುಡಿಯುವ ನೀರಿನ ಅಗತ್ಯವನ್ನು ಮನವರಿಕೆ ಮಾಡಿಕೊಡಲಾಗಿತ್ತು. ಈ ಸಂಬಂಧ ಅವರು ಸೂಚಿಸಿದ ಒಂದು ದಿನದೊಳಗೆ ನಾವು ಪತ್ರ ಬರೆದು ವಿನಂತಿಸಿದ್ದೆವು. ಅವರು ಮಂತ್ರಿಮಂಡಲದ ಸಮ್ಮತಿ ಪಡೆದು ನಮಗೆ ಸಕಾರಾತ್ಮಕವಾಗಿ
ಪ್ರತಿಕ್ರಿಯಿಸಿದ್ದರು. ಈವರೆಗೆ ಗೋವಾ ಮುಖ್ಯ ಮಂತ್ರಿಗಳಿಗೆ ಒಂದೇ ಒಂದು ಪತ್ರ ಬರೆಯದ ಸಿಎಂ ಸಿದ್ದರಾಮಯ್ಯ
ಅವರ ಕೈವಾಡ, ರಾಹುಲ್ ಗಾಂಧಿ ಸೂಚನೆ 30 ವರ್ಷದ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಕಲ್ಲು
ಹಾಕಿತು ಎಂದರು. “ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು.
ಸಮಸ್ಯೆ ಬಗೆಹರಿಸದೆ ಕಾಂಗ್ರೆಸ್ ರಾಜಕೀಯ ದೊಂಬರಾಟ ಆಡುತ್ತಿದೆ. ನಾನು ನವಲಗುಂದದಲ್ಲಿ ಒಂದು ಲಕ್ಷ ರೈತರನ್ನು
ಒಗ್ಗೂಡಿಸುತ್ತೇನೆ. ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನಡೆದ ವಿಚಾರಗಳ ಚರ್ಚೆಗೆ
ನಾನು ಸಿದಟಛಿ. ಅವರು ಬರಲು ತಯಾರಿದ್ದಾರೆಯೇ’ ಎಂದು ಬಿಎಸ್‌ವೈ ಸವಾಲು ಎಸೆದರು.