Advertisement

ಮಣಿಪಾಲ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ವ್ಯವಸ್ಥೆ : ಮಾಹೆಗೆ ಗೋವಾ ಮುಖ್ಯಮಂತ್ರಿ ಮೆಚ್ಚುಗೆ

02:55 PM Oct 09, 2022 | Team Udayavani |

ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌(ಮಾಹೆ)ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಶನಿವಾರ ಭೇಟಿ ನೀಡಿದರು.

Advertisement

ಮಾಹೆಯ ಎಕ್ಸ್‌ಪೀರಿಯನ್ಸ್‌ ಥಿಯೇಟರ್‌ಗೆ ಭೇಟಿ ನೀಡಿದ ಅವರು, ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿ ಡಾ| ಟಿಎಂಎ ಪೈ ಅವರ ಧ್ಯೇಯೋದ್ದೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್‌ ಸಂದರ್ಭದಲ್ಲಿ ಗೋವಾದ ಮಣಿಪಾಲ ಆಸ್ಪತ್ರೆ ಜನರಿಗೆ ಉತ್ತಮ ಸವಲತ್ತು ಒದಗಿಸಿದೆ. ಸರಕಾರದಿಂದಲೂ ಉತ್ತಮ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು. ಮಣಿಪಾಲ ವಿ.ವಿ. ನೀಡುತ್ತಿರುವ ಶಿಕ್ಷಣ ಅತ್ಯದ್ಭುತವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿ.ವಿ. ರ್‍ಯಾಂಕಿಂಗ್‌ನಲ್ಲಿ ನಂಬರ್‌ ವನ್‌ ಸ್ಥಾನಕ್ಕೆ ಏರುವಂತಾಗಲಿ ಎಂದರು.

ಗೋವಾದ ಮಣಿಪಾಲ ಆಸ್ಪತ್ರೆಯ ಬಗ್ಗೆ ನಿರ್ದೇಶಕ ಸುರೇಂದ್ರ ಪ್ರಸಾದ್‌ ಅವರು ವಿವರಿಸಿದರು. ಮಣಿಪಾಲ ಸೀನಿಯರ್‌ ಲೀಡರ್‌ಶಿಪ್‌ ತಂಡದೊಂದಿಗೆ ಸಮಾಲೋಚನೆ ನಡೆಸಿದರು.

ಶಾಸಕ ಕೆ.ರಘುಪತಿ ಭಟ್‌, ಪ್ರಸಾದ್‌ ನೇತ್ರಾಲಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ರಿಜಿಸ್ಟ್ರಾರ್‌ ಡಾ| ನಾರಾಯಣ ಸಭಾಹಿತ್‌, ಪ್ರಮುಖರಾದ ಡಾ| ಆನಂದ ವೇಣುಗೋಪಾಲ್‌, ಡಾ| ದಿಲೀಪ್‌ ಜಿ.ನಾಯ್ಕ, ಡಾ| ವೆಂಕಟರಾಯ ಪ್ರಭು, ಸಿ.ಜಿ. ಮುತ್ತಣ್ಣ, ಡಾ| ಶರತ್‌ ರಾವ್‌, ಡಾ| ಆನಂದ ವೇಣುಗೋಪಾಲ್‌, ಡಾ| ಅವಿನಾಶ್‌ ಶೆಟ್ಟಿ, ಡಾ| ಉನ್ನಿಕೃಷ್ಣನ್‌, ಸಾಗಿರ್‌ ಸಿದ್ದಿಕ್‌, ಸಿಡಿಆರ್‌ ಡಾ| ಅನಿಲ್‌ ರಾಣಾ, ಡಾ| ಮಲ್ಲಿಕಾರ್ಜುನ ರಾವ್‌, ಡಾ| ಅರುಣ್‌ ಮಯ್ಯ, ಚೆಫ್ ತಿರು, ಡಾ| ಮೋನಿಕಾ ಸೊಲೊಮೊನ್‌, ಡಾ| ಜುಡಿನ್‌ ನರೊನ್ಹಾ, ಡಾ| ಮಧು ವೀರರಾಘವನ್‌, ಡಾ| ವಿನೋದ್‌ ಥಾಮಸ್‌, ಪ್ರಕಾಶ್‌ಚಂದ್ರ, ಜೆರ್ರಿ ಜೋಸೆಫ್, ಪಿಆ ರ್‌ಒ ಎಸ್‌.ಪಿ. ಕರ್‌, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next