Advertisement

ಪರ್ರೀಕರ್‌ ಗೋವಾ ಸಿಎಂ ಆಗಿ ಮುಂದುವರಿಯುವರು: ಡೆಪ್ಯುಟಿ ಸ್ಪೀಕರ್‌

12:38 PM Sep 15, 2018 | Team Udayavani |

ಪಣಜಿ : ಮನೋಹರ್‌ ಪರ್ರೀಕರ್‌ ಅವರು ಗೋವೆಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಗೋವಾ ವಿಧಾನಸಭಾ ಡೆಪ್ಯುಟಿ ಸ್ಪೀಕರ್‌ ಹೇಳಿದ್ದಾರೆ. ಹಾಗಾಗಿ ಪರ್ರೀಕರ್‌ ಅನಾರೋಗ್ಯದ ಪ್ರಯುಕ್ತ ಗೋವೆಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದೆಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

Advertisement

ಗೋವೆಯ ಮುಖ್ಯಮಂತ್ರಿ ಪರ್ರೀಕರ್‌ ಅವರು ವಿಮಾನ ಮೂಲಕ ಇಂದು ಶನಿವಾರ ಮಧ್ಯಾಹ್ನ 1.30ಕ್ಕೆ ದಿಲ್ಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸಸ್‌ (ಏಮ್ಸ್‌) ತಲುಪಿ ಅಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಡೆಪ್ಯುಟಿ ಸ್ಪೀಕರ್‌ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಪರ್ರೀಕರ್‌ ಅವರಿಗಾಗಿ ವಿಶೇಷ ವಿಮಾನವನ್ನು ವ್ಯವಸ್ಥೆಗೊಳಿಸಿದ್ದಾರೆ. ಏಮ್ಸ್‌ ನಲ್ಲಿ ಪರ್ರೀಕರ್‌ ಅವರನ್ನು ಸಂಪೂರ್ಣ ಖಾಸಗಿ ವಾರ್ಡ್‌ ನಲ್ಲಿ ಇರಿಸಿ ಹೆಚ್ಚುವರಿ ಚಿಕಿತ್ಸೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next