ನವದೆಹಲಿ: ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮೇ 9ರಿಂದ ಹದಿನೈದು ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಗೋವಾ ಸರ್ಕಾರ ಶುಕ್ರವಾರ(ಮೇ 07) ಘೋಷಿಸಿದೆ.
ಇದನ್ನೂ ಓದಿ:ಡಿಜಿಲಾಕರ್ ಬಳಸಿ, ನಿಮ್ಮ ಎಲ್ಲಾ ದಾಖಲೆಪತ್ರಗಳನ್ನು ಸುರಕ್ಷಿತವಾಗಿರಿಸಿ
ಅಷ್ಟೇ ಅಲ್ಲ ಬೇರೆ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ಜನರು ಅಥವಾ ಪ್ರವಾಸಿಗರು ಕೋವಿಡ್ 19 ನೆಗೆಟಿವ್ ವರದಿ ಅಥವಾ ಲಸಿಕೆ ತೆಗೆದುಕೊಂಡ ಸರ್ಟಿಫಿಕೇಟ್ ತರುವುದು ಕಡ್ಡಾಯ ಎಂದು ಗೋವಾರ ಸರ್ಕಾರ ಆದೇಶದಲ್ಲಿ
ತಿಳಿಸಿದೆ.
ಕರ್ಫ್ಯೂ ಸಂದರ್ಭದಲ್ಲಿ ಕಿರಾಣಿ ಅಂಗಡಿ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಮೆಡಿಕಲ್ ಶಾಪ್ ಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಶೇ.25ರಷ್ಟು ಮಂದಿ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಆದರೆ ಜನರು ಸುಳ್ಳು ಕಾರಣ ನೀಡಿ ಹೊರಗೆ ಬಂದು ತಿರುಗಾಡುತ್ತಿರುತ್ತಾರೆ ಎಂದು ಮುಖ್ಯಮಂತ್ರಿ ಸಾವಂತ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು. ಲಾಕ್ ಡೌನ್ ವೇಳೆ ಎಲ್ಲಾ ಕಾರ್ಯಕ್ರಮಗಳು, ಮದುವೆ ಸಮಾರಂಭ ನಿಷೇಧಿಸಲಾಗಿದೆ ಎಂದು ಹೇಳಿದರು.