ಮೈಸೂರು: ವಿದ್ಯಾರ್ಥಿ ಜೀವನ ಎಂಬುದು ಅಮೂಲ್ಯವಾದ ಸಮಯವಾಗಿದ್ದು, ಹೀಗಾಗಿ ವಿದ್ಯಾರ್ಥಿಗಳು ಗುರಿಯೊಂದಿಗೆ ಮುನ್ನಡೆಯುವ ಮೂಲಕ ಸಾಧನೆ ಮಾಡುವತ್ತ ಗಮನಹರಿಸುವಂತೆ ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಸಲಹೆ ನೀಡಿದರು.
ನಗರದ ಕೆಆರ್‌ಎಸ್ ರಸ್ತೆಯ ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದ ಎಂ.ಗೋವಿಂದರಾವ್ ಮೆಮೋರಿಯಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಂತ್ರಿಕ-ಸಾಂಸ್ಕೃತಿಕ ಹಬ್ಬ ಗೀತಾಯಾನ-2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವ್ಯಕ್ತಿಗೆ ಆತನ ವಿದ್ಯಾರ್ಥಿ ಜೀವನ ಎಂಬುದು ಅತ್ಯಂತ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿ ಜೀವನವನ್ನು ಸಂತೋಷವಾಗಿ ಕಳೆಯುವುದರ ಜತೆಗೆ ಈ ಸಂದರ್ಭದಲ್ಲಿ ಭವಿಷ್ಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಧಾರಗಳಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಆದರೆ, ವಿದ್ಯಾರ್ಥಿಗಳು ಇದರಿಂದ ಆತಂಕಗೊಳ್ಳದೆ ಗುರುಗಳ ಹಾಗೂ ಪೋಷಕರ ಮಾರ್ಗದರ್ಶನದಲ್ಲಿ ಸವಾಲುಗಳನ್ನು ದಾಟಿ,
ಸಾಧನೆಯತ್ತ ಮುನ್ನಡೆಯಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯದ ಕ್ಷೇತ್ರದಲ್ಲೇ ತಮ್ಮನ್ನು ತೊಡಗಿಸಿಕೊಂಡರೆ, ಆ ಕ್ಷೇತ್ರದಲ್ಲಿ ಸಾಧನೆ ಮಾಡಿ ಏನಾದರೂ ಕೊಡುಗೆ ನೀಡಲು ಸಾಧ್ಯ ಎಂದ ಅವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದರು.
ಸಾಮಾಜಿಕ ಕಳಕಳಿ ಇರಲಿ: ರಕ್ಷಣಾ ಸಚಿವರ ಮಾಜಿ ಸಲಹೆಗಾರ ಡಾ.ವಿ.ಕೆ.ಆತ್ರೆ ಮಾತನಾಡಿ, ವಿಜಾnನವೆಂಬುದು ಕುತೂಹಲವಾಗಿದ್ದು, ಪ್ರಕೃತಿಯ ಎಲ್ಲಾ ಚಟುವಟಿಕೆಗಳು ವಿಜಾnನವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಜಾnನ ಮತ್ತು ತಂತ್ರಜಾnನ ಕ್ಷೇತ್ರದಲ್ಲಿ ಅಪಾರ ಬದಲಾವಣೆಯಾಗುತ್ತಿದ್ದು,
ಈ ಬದಲಾವಣೆಯಿಂದ ಅಪಾರ ಪ್ರಮಾಣದಲ್ಲಿ ಅವಕಾಶಗಳು ದೊರೆತರು ಸವಾಲುಗಳು ಅಷ್ಟೇ ಪ್ರಮಾಣದಲ್ಲಿರುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಇಂತಹ ಸವಾಲುಗಳನ್ನು ಅರಿತುಕೊಂಡು ಮುನ್ನಡೆಯಬೇಕಿದ್ದು, ತಮ್ಮ ವೈಯಕ್ತಿಕ ಏಳಿಗೆಯ ಜತೆಗೆ ಸಾಮಾಜಿಕ ಕಳಕಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೀತಾ ಶಿಶು ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ವನಜಾ ಬಿ.ಪಂಡಿತ್, ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆರ್.ಕೆ.¸ರತ್, ಸಹಾಯಕ ಆಡಳಿತಾಧಿಕಾರಿ ಅನುಪಮ ಬಿ.ಪಂಡಿತ್, ಪ್ರಾಂಶುಪಾಲ ಡಾ.ಎಂ. ಶಿವಕುಮಾರ್, ಕಾರ್ಯಕ್ರಮ ಸಂಯೋಜಕ ಡಾ.ಎಸ್.ಬೆಳ್ಳಪ್ಪ ಹಾಜರಿದ್ದರು.