Advertisement

ನಾಡಿಗೆ ಶ್ರೇಷ್ಠ ನಟರನ್ನು ಕೊಟ್ಟಿದ್ದು ಗುಬ್ಬಿ ಕಂಪನಿ

01:29 PM Feb 27, 2017 | Team Udayavani |

ಧಾರವಾಡ: ಕನ್ನಡ ರಂಗಭೂಮಿಗೆ ಶ್ರೇಷ್ಠ ನಟರನ್ನು ಕೊಡುಗೆಯಾಗಿ ನೀಡಿದ್ದು ಗುಬ್ಬಿ ಕಂಪನಿ ಎಂದು ಹಿರಿಯ ಸಾಹಿತಿ ಡಾ| ವೀರಣ್ಣ ರಾಜೂರ ಹೇಳಿದರು. 

Advertisement

ಗುಬ್ಬಿ ವೀರಣ್ಣ  ಟ್ರಸ್ಟ್‌ ಮತ್ತು ರಂಗ ಪರಿಸರ ಜಂಟಿಯಾಗಿ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಡಾ|ಗುಬ್ಬಿ ವೀರಣ್ಣ ಅವರ 125ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ನಾಲ್ಕು ದಿನಗಳ ನಾಟಕೋತ್ಸವ, ರಂಗ ಚಿಂತನೆ ಮತ್ತು ರಂಗಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಶತಮಾನದ ಇತಿಹಾಸ ಹೊಂದಿದ್ದ ಗುಬ್ಬಿ ಕಂಪೆನಿ ಬಹುತೇಕ ಕಲಾವಿದರಿಗೆ ಆಶ್ರಯತಾಣವಾಗಿತ್ತು. ಕನ್ನಡ ರಂಗಭೂಮಿಯ ಶ್ರೇಷ್ಠ ನಟರೆಲ್ಲರೂ ಒಂದು ಬಾರಿಯಾದರೂ ಗುಬ್ಬಿ ಕಂಪೆನಿಯಲ್ಲಿ ಅಭಿನಯಿಸಿದವರೇ  ಆಗಿದ್ದಾರೆ.

ಉತ್ತಮ ನಾಟಕಗಳನ್ನು ಆಡುವುದರ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎನ್ನುವುದು ಗುಬ್ಬಿ ವೀರಣ್ಣ ಅವರ ಆಶಯವಾಗಿತ್ತು. ಗುಣಮಟ್ಟಕ್ಕೆ ಸಂಬಂಧಿಧಿಸಿದಂತೆ ಅವರು ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ ಎಂದು ಸ್ಮರಿಸಿದರು. 

ವೃತ್ತಿ ರಂಗಭೂಮಿ ಎಂದರೆ ಕೂಡಲೇ ನೆನಪಾಗುವುದು ಗುಬ್ಬಿ ವೀರಣ್ಣ ಅವರ ಹೆಸರು ಮತ್ತು ಕಂಪೆನಿ. ತಮ್ಮ ಕೆಲಸದ ಮೂಲಕ ಅದಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಆದರೆ ಪ್ರಸ್ತುತ ಯುವ ಪೀಳಿಗೆಗೆ ಅವರ ಹೆಸರು, ಕೆಲಸ ಕೂಡಾ ಗೊತ್ತಿಲ್ಲ.

Advertisement

ಮರೆತು ಹೋಗುತ್ತಿರುವ ಅಂಥ  ಚೇತನಗಳ ನೆನಪು, ಪರಿಚಯ ಇಂದಿನ ಪೀಳಿಗೆಗೆ ಆಗಬೇಕು. ಅದು ಇಂಥ ನಾಟಕೋತ್ಸವಗಳ ಮೂಲಕವೇ ಅಗಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಗುಬ್ಬಿ ವೀರಣ್ಣ  ಅವರ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡ ಕಾμà ಟೇಬಲ್‌ ಕೃತಿಯನ್ನು ಹಿರಿಯ ರಂಗ ನಿರ್ದೇಶಕ ಸಿ.ಬಸಲಿಂಗಯ್ಯ ಬಿಡುಗಡೆಗೊಳಿಸಿದರು.

ಹಿರಿಯ ರಂಗನಟ ಕೊಟ್ರೇಶ  ಅಂಗಡಿ ಅವರನ್ನು ಗೌರವಿಸಲಾಯಿತು. ಎಚ್‌.ಎಂ.ಗಂಗಯ್ಯ, ರಾಜೇಶ ಗುಬ್ಬಿ, ಡಿ.ಸಿ.ಕುಮಾರಸ್ವಾಮಿ, ರಂಗ ಪರಿಸರದ ಅಧ್ಯಕ್ಷ ವಿಠಲ ಕೊಪ್ಪದ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next