Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ರುಚಿ-ಶುಚಿಗೆ ಆದ್ಯತೆ ನೀಡಿ‌: ಜಿಲ್ಲಾಧಿಕಾರಿ ರಘುನಂದನ್‌

05:13 PM Jan 02, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ನಗರದ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಹೊಸ ಆಹಾರದ ಮೆನುವಿನಂತೆ ಆಹಾರ ವಿತರಣೆಗೆ ಜಿಲ್ಲಾಧಿಕಾರಿ ರಘುನಂದನ್‌ ಮೂರ್ತಿ ಚಾಲನೆ ನೀಡಿದರು.

Advertisement

ಸೋಮವಾರ ಇಂದಿರಾ ಕ್ಯಾಂಟಿನ್‌ನಲ್ಲಿ ಆಹಾರ ಸೇವಿಸುವ ಮೂಲಕ ಆಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕ್ಯಾಂಟೀನ್‌ ನಲ್ಲಿ ರುಚಿ ಹಾಗೂ ಶುಚಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮಮತಾ, ನಗರಸಭೆ ಪೌರಾಯುಕ್ತ ಪಶುರಾಮ ಚಲವಾದಿ, ನಗರಸಭೆ ಸದಸ್ಯರು ಇತರರಿದ್ದರು.

ಆಹಾರ ವಿವರ: ರವಿವಾರ ಬೆಳಗಿನ ಉಪಾಹಾರ ಇಡ್ಲಿ-ಚಟ್ನಿ, ಕೇಸರಿಬಾತ್‌, ಖಾರಾ ಬಾತ್‌, ಮಧ್ಯಾಹ್ನ ಊಟಕ್ಕೆ ಅನ್ನ ಅಲಸಂದಿ ಕಾಳು ಸಾಂಬಾರ್‌ ಹಾಗೂ ಕೀರ್‌, ರಾತ್ರಿ ಊಟಕ್ಕೆ ಅನ್ನ, ಮೊಳಕೆ ಕಾಳು ಸಾಂಬಾರ್‌ ಹಾಗೂ ಜೋಳದ ರೊಟ್ಟಿ, ಸೊಪ್ಪಿನ ಪಲ್ಯ, ಸೋಮವಾರ ಬೆಳಗಿನ ಉಪಾಹಾರ ಇಡ್ಲಿ-ಚಟ್ನಿ, ಮಂಡಕ್ಕಿ, ಬಜ್ಜಿ, ಮಧ್ಯಾಹ್ನ ಊಟಕ್ಕೆ ಅನ್ನ, ಮೂಲಂಗಿ ಸಾಂಬಾರ್‌ ಹಾಗೂ ಮೊಸರನ್ನ, ರಾತ್ರಿ ಊಟಕ್ಕೆ ಅನ್ನ, ಹಿರೇಕಾಯಿ ಸಾಂಬಾರ್‌, ಮೊಸರನ್ನ, ಚಪಾತಿ- ಸಾಗು.

ಮಂಗಳವಾರ ಬೆಳಗಿನ ಉಪಾಹಾರ ಇಡ್ಲಿ-ಸಾಂಬಾರ್‌, ಖಾರಾ ಬಾತ್‌-ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ, ಬದನೆಕಾಯಿ ಪಲ್ಯ ಹಾಗೂ ರಾಗಿ ಅಂಬಲಿ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪಿನ ಪಲ್ಯ, ರಾಗಿ ಅಂಬಲಿ, ಅನ್ನ, ಕುಂಬಳಕಾಯಿ ಸಾಂಬಾರ್‌ ಹಾಗೂ ರಾಗಿ ಅಂಬಲಿ, ಚಪಾತಿ ಸಾಗು.

Advertisement

ಬುಧವಾರ ಬೆಳಗಿನ ಉಪಾಹಾರ ಇಡ್ಲಿ-ಕರಿಬೇವು ಚಟ್ನಿ, ಅವಲಕ್ಕಿ ಚಟ್ನಿ, ಮಧ್ಯಾಹ್ನ ಊಟ ಅನ್ನ, ಬೀನ್ಸ್‌ ಸಾಂಬಾರ್‌ ಹಾಗೂ ಮೊಸರನ್ನ, ರಾತ್ರಿ ಊಟಕ್ಕೆ ಚಪಾತಿ ಸಾಗು ಹಾಗೂ ಮೊಸರನ್ನ, ಅನ್ನ, ಮೂಲಂಗಿ ಸಾಂಬಾರ್‌ ಹಾಗೂ ಚಪಾತಿ ಸಾಗು.

ಗುರುವಾರ ಬೆಳಗಿನ ಉಪಾಹಾರ ಇಡ್ಲಿ ಸಾಂಬಾರ್‌, ವೆಜ್‌ ಪಲಾವ್‌ ಚಟ್ನಿ, ಮಧ್ಯಾಹ್ನ ಅನ್ನ, ಮೊಳಕೆಕಾಳ ಸಾಂಬಾರ್‌ ಹಾಗೂ ಕೀರ್‌, ರಾತ್ರಿ ಊಟಕ್ಕೆ ಜೋಳದ ರೊಟ್ಟಿ ಸೊಪ್ಪಿನ ಪಲ್ಯ, ಕೀರು, ಅನ್ನ ಬದನೆಕಾಯಿ ಸಾಂಬಾರ್‌ ಹಾಗೂ ಜೋಳದ ರೊಟ್ಟಿ, ಸೊಪ್ಪಿನ ಪಲ್ಯ. ಶುಕ್ರವಾರ ಬೆಳಗಿನ ಉಪಾಹಾರ ಇಡ್ಲಿ ಸಾಂಬಾರ್‌, ಚಿತ್ರಾನ್ನ ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಹಿರೇಕಾರಿ ಸಾಂಬಾರ್‌ ಹಾಗೂ ರಾಗಿ ಅಂಬಲಿ, ಚಪಾತಿ ಸಾಗು ಹಾಗೂ ರಾಗಿ ಅಂಬಲಿ, ಅನ್ನ, ಅಲದಂದಿ ಕಾಳು ಸಾಂಬಾರ್‌ ಹಾಗೂ ಚಪಾತಿ ಸಾಗು.

ಶನಿವಾರ ಬೆಳಗಿನ ಉಪಾಹಾರ ಇಡ್ಲಿ ಸಾಂಬಾರ್‌, ಆಲೂಬಾತ್‌ ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಕುಂಬಳಕಾಯಿ ಸಾಂಬಾರ್‌ ಹಾಗೂ ಕೀರ್‌, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪಿನ ಪಲ್ಯ, ಕೀರು, ಅನ್ನ, ನುಗ್ಗೆಕಾಯಿ ಸಾಂಬಾರ್‌ ಹಾಗೂ ಜೋಳದ ರೊಟ್ಟಿ, ಸೊಪ್ಪಿನ ಪಲ್ಯ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next