Advertisement

ಗಂಗಾವತಿ ಬಿಜೆಪಿ ಟಿಕೆಟ್ ಕೊಡಿ: ಹೆಚ್.ಆರ್.ಚನ್ನಕೇಶವ ಚುನಾವಣ ಅಖಾಡಕ್ಕೆ

06:23 PM Mar 03, 2023 | Team Udayavani |

ಗಂಗಾವತಿ: ಗಂಗಾವತಿ ಮತ ಕ್ಷೇತ್ರದ ಜನತೆ ಹೊಸ ಮುಖಗಳಿಗೆ ಆದ್ಯತೆ ನೀಡುವ ಮೂಲಕ ಇದುವರೆಗೂ ಅಭಿವೃದ್ಧಿ ಮಾಡದೇ ಇರುವವರನ್ನು ತಿರಸ್ಕಾರ ಮಾಡಬೇಕು. ಸ್ಥಳೀಯವಾಗಿ ನಮ್ಮ ತಂದೆಯ ಕಾಲದಿಂದಲೂ ಗಂಗಾವತಿಯಲ್ಲಿ ಶಾಂತಿ ಸೌಹಾರ್ದತೆ ಮತ್ತು ಎಲ್ಲಾ ಸಮುದಾಯ ಪ್ರೀತಿ ವಿಶ್ವಾಸ ನಮ್ಮ ಮೇಲಿದ್ದು ಈ ಭಾರಿ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೇಳಿದ್ದು ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಿ ಜನರ ಆಶೀರ್ವಾದ ಪಡೆಯುವುದಾಗಿ ಬಿಜೆಪಿ ಮುಖಂಡ ಹೆಚ್.ಆರ್.ಚನ್ನಕೇಶವ ಹೇಳಿದರು.

Advertisement

ನಗರದ ವಿರೂಪಾಪೂರ-ಹಿರೇಜಂತಗಲ್ ಮತ್ತು ಸರೋಜ ನಗರದಲ್ಲಿ ಮನೆ ಮನೆಗೆ ಚುನಾವಣ ಪ್ರಚಾರದ ಕರ ಪತ್ರ ಹಂಚಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2013 ರಿಂದಲೇ ಸಕ್ರಿಯ ರಾಜಕೀಯದಲ್ಲಿದ್ದು ಬಿಜೆಪಿ ಜತೆ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯ ಬಿ ಫಾರಂ ಕೇಳಿದಾಗ ಹೈಕಮಾಂಡ್ ಕೆಲಸ ಮಾಡುವಂತೆ ಸೂಚನೆ ನೀಡಿತ್ತು. ಪಕ್ಷ ಹಾಗೂ ಅಭ್ಯರ್ಥಿಗಳ ಪರ ನಿಯತ್ತಿನಿಂದ ಕಾರ್ಯ ಮಾಡಿದ್ದು ಮುಮಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡನ್ನು ಮನವಿ ಮಾಡಲಾಗಿದೆ. ಈಗಾಗಲೇ ರಕ್ಷಣಾ ಸಚಿವರಾದ ರಾಜನಾಥ ಸಿಂಗ್, ಯಡಿಯೂರಪ್ಪ, ಸಿ.ಟಿ.ರವಿ, ವಿಜಯೇಂದ್ರ ಸೇರಿ ಹಲವು ಮುಖಂಡರನ್ನು ಕಂಡು ಮನವಿ ಮಾಡಲಾಗಿದೆ. ಜತೆಗೆ ಗಂಗಾವತಿ ಮತ ಕ್ಷೇತ್ರದಲ್ಲಿ ಈಗಾಗಲೇ ಎರಡು ಭಾರಿ ಕ್ಷೇತ್ರದಾದ್ಯಂತ ಸಂಚಾರ ಮಾಡಿ ಜನರ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಹಿಂದೂಗಳ ಪವಿತ್ರ ಶಕ್ತಿ ಕೇಂದ್ರ ಕಿಷ್ಕಿಂದಾ ಅಂಜನಾದ್ರಿ ಹಾಗೂ ಸುತ್ತಲಿನ ಗ್ರಾಮಗಳ ಸರ್ವತೋಮುಖ ಪ್ರಗತಿಗೆ ನೀಲ ನಕ್ಷೆ ತಯಾರಿಸಿದ್ದು ತಮ್ಮನ್ನು ಆಶೀರ್ವಾದ ಮಾಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಬಿಜೆಪಿ ತಮಗೆ ಟಿಕೆಟ್ ನೀಡಿದರೆ ಹಿಂದುಗಳಿದ, ಅಲ್ಪಸಂಖ್ಯಾತರು ಸೇರಿ ಮುಂದುವರಿದ ಜನಾಂಗದವರೂ ಸೇರಿ ಗೆಲುವು ದೊರಕಲಿದೆ ಎಂದರು.

ಒಂದು ವೇಳೆ ಬಿಜೆಪಿ ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡಿ ಜನರ ಆಶೀರ್ವಾದ ಪಡೆಯಲಾಗುತ್ತದೆ. ತಮ್ಮ ಬಳಿ ದೊಡ್ಡ ಯುವ ಪಡೆ ಇದ್ದು ದೇಶ, ಭಾಷೆ ಧರ್ಮ ಮತ್ತು ಬಡವರ ಬಗ್ಗೆ ಕಾಳಜಿಯ ರೋಜನೆ ಅನುಷ್ಠಾನಕ್ಕೆ ಕಾರ್ಯ ಮಾಡಲಾಗುತ್ತದೆ. ಈಗಾಗಲೇ ಇರಕಲ್ ಗಡಾ, ಆನೆಗೊಂದಿ ಭಾಗದಲ್ಲಿ ಮನೆ ಮನೆಗೆ ತೆರಳಿ ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಇಡೀ ಕ್ಷೇತ್ರ ಜನರು ತನ್ನನ್ನು ಪ್ರೀತಿ ಗೌರವದಿಂದ ಕಾಣುತ್ತಿದ್ದಾರೆ. ಇವರಿಗಾಗಿ ಕ್ಷೇತ್ರದಲ್ಲಿ ಸದಾ ಸೇವೆ ಮಾಡುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next