Advertisement

ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಿ: ಶಿಗ್ಲಿ

04:49 PM Nov 16, 2021 | Team Udayavani |

ಲಕ್ಷ್ಮೇಶ್ವರ: ಮಕ್ಕಳು ದೇಶದ ಸಂಪತ್ತು ಅವರ ಮನಸ್ಸು ಮಣ್ಣಿನ ಮುದ್ದೆ ಮತ್ತು ಬಿಳೆ ಹಾಳೆಯಂತೆ. ಬಾಲ್ಯದಲ್ಲೇ ಅವರಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂದು ಸಿಆರ್‌ಪಿ ಎನ್‌.ಎನ್‌. ಶಿಗ್ಲಿ ಹೇಳಿದರು.

Advertisement

ಪಟ್ಟಣದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಜನಪದ ನೃತ್ಯ ಮತ್ತು ಚಿತ್ರಕಲಾ ಸ್ಪರ್ಧೆ ಹಾಗೂ ಫಿಟ್‌ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಪ್ರೀತಿ, ವಿಶ್ವಾಸದಿಂದ ಉತ್ತಮವಾದುದನ್ನು ಕಲಿಸುವ ಮೂಲಕ ಮಕ್ಕಳನ್ನೇ ಸಂಪತ್ತನ್ನಾಗಿಸಬೇಕು.

ಮಕ್ಕಳು ಬಾಲ್ಯದಲ್ಲಿ ಅನುಕರಣೆ ಮೂಲಕವೇ ಎಲ್ಲವನ್ನೂ ಗ್ರಹಿಸಿ ಕಲಿಯುತ್ತಾರೆ. ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕು. ಹಿರಿಯರ ನಡೆ-ನುಡಿ ಜವಾಹರಲಾಲ್‌ ನೆಹರೂ ಅವರಂತೆ ಮಕ್ಕಳಿಗೆ ಪ್ರೇರಣೆ ಮತ್ತು ಆದರ್ಶವಾಗಿರಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕ ರಮೇಶ ನವಲೆ, ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರಮಠ, ಸುವರ್ಣಬಾಯಿ ಬಹದ್ದೂರ್‌ ದೇಸಾಯಿ, ಜಯಲಕ್ಷ್ಮೀ ಮಹಾಂತಶೆಟ್ರ, ರೋಹಿಣಿಬಾಯಿ ಬಹದ್ದೂರ್‌ ದೇಸಾಯಿ, ರೇಣುಕ ಪ್ರಸಾದ, ಜೆ.ಡಿ. ಲಮಾಣಿ, ಶೀಲಾ ತಳವಾರ, ಸಚಿನ್‌, ಎಸ್‌.ಎಂ. ಹಾದಿಮನಿ, ಪಿ.ಎಲ್‌. ಪಾಟೀಲ ಉಪಸ್ಥಿತರಿದ್ದರು. ಗ್ರಾಮೀಣ ಸೊಬಗಿನ ವೇಷಭೂಷಣದಲ್ಲಿ ಮಕ್ಕಳು ಮಾಡಿದ ನೃತ್ಯ ಗಮನ ಸೆಳೆಯಿತು. ಚಿತ್ರಕಲೆಯಲ್ಲಿ ಕವಿತಾ ಮುಳಗುಂದ ಪ್ರಥಮ, ದಾನೇಶ್ವರಿ ಗವಿ ದ್ವಿತೀಯ, ರೇಷ್ಮಾ ಬಾಕಳೆ ತೃತೀಯ, ಜಾನಪದ ನೃತ್ಯದಲ್ಲಿ ಕೀರ್ತಿ ಗುಂಪಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆಯಿತು. ಮೃತ್ಯುಂಜಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next