Advertisement

ಅರ್ಹರಿಗೆ ಬ್ಯಾಂಕ್‌ ಸಾಲ ನೀಡಿ

06:40 AM Jul 06, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಬ್ಯಾಂಕಿಂಗ್‌ಯೇತರ ಕಂಪನಿಗಳಿಗೂ ಹಾಗೂ ಸೂಕ್ಷ್ಮ, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನೀಡಿರುವ ಜಿಇಸಿಎಲ್‌ ಯೋಜನೆಯಡಿ ಅರ್ಹ  ಫ‌ಲಾನುಭವಿಗಳಿಗೆ ಸಾಲ ನೀಡಬೇಕೆಂದು ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆದ ಸಭೆ ಯ ಅಧ್ಯಕ್ಷತೆ ವಹಿಸಿ  ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ 3 ಲಕ್ಷ ಕೋಟಿ ರೂ. ಕೋವಿಡ್‌-19 ತುರ್ತು ಪರಿಸ್ಥಿತಿ ಪ್ಯಾಕೇಜ್‌ ಆಗಿ ಘೋಷಣೆ ಮಾಡಲಾಗಿದೆ ಎಂದರು. ಕಿಸಾನ್‌ ಕ್ರೆಡಿಟ್‌ ಹೊಂದಿರುವ, ಅವಶ್ಯವಿರುವ ರೈತರು ಸೇರಿದಂತೆ ಅರ್ಹ  ಫ‌ಲಾನುಭವಿಗಳಿಗೆ ಅನುಕೂಲವಾಗುವಂತೆ ಯಾವುದೇ ಮೇಲಾಧಾರ ವಿಲ್ಲದೆ ಸಾಲ ನೀಡಬೇಕು.

ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಹಣಕಾಸಿನ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್‌ಗಳು ಮುಂದಾಗಬೇಕು ಎಂದರು. ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಎಲ್ಲಾ ಬ್ಯಾಂಕ್‌ಗಳಲ್ಲಿ ಉಳಿದ ಯೋಜನೆಗಳ ಅರ್ಜಿಗಳನ್ನು ಸಕಾಲಕ್ಕೆ ಜಾರಿಗೊಳಿಸಬೇಕು ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ವ್ಯವಸಾಯಕ್ಕೆ ಸಂಬಂಧಿಸಿದಂತೆ ರಾಜ್ಯ  ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು. ಬಿತ್ತಿಪತ್ರಗಳನ್ನು ಪಂಚಾಯಿತಿ,

ನಾಡ ಕಚೇರಿ ಸೇರಿದಂತೆ ವಿವಿಧೆಡೆಯಲ್ಲಿ ಅಂಟಿಸುವುದ ರೊಂದಿಗೆ ಜಾಹೀರಾತು ನೀಡಬೇಕು.  ಇದರಿಂದ ಸಮಾಜದಲ್ಲಿ ಸಣ್ಣ ರೈತರು ಅಭಿವೃದಿಯಾಗಲು ಸಾಧ್ಯ ವಾಗುತ್ತದೆ. ಬ್ಯಾಂಕ್‌ ಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಬಸವರಾಜ್‌, ಜಿಲ್ಲಾ ಕೈಗಾರಿಕಾ ಕೇಂದ್ರ  ವ್ಯವಸ್ಥಾಪಕ ಅತಿಕುಲ್ಲಾ ಷರೀಫ್, ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next