Advertisement

ಮಕ್ಕಳ ಕೈಗೆ ಪೊರಕೆ ಬದಲು ಲೇಖನಿ ಕೊಡಿ 

01:34 PM Oct 03, 2017 | Team Udayavani |

ಹುಣಸೂರು: ಪೌರಕಾರ್ಮಿಕರ ಮಕ್ಕಳ ಕೈಗೆ ಪೊರಕೆ ಬದಲಿಗೆ ಲೇಖನಿ ಕೊಡಿಸಿದರೆ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಸಮಬಾಳು ಸಮಪಾಲಿಗೆ ನೈಜ ಅರ್ಥ ಬರಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಲಕ್ಷ್ಮಣ್‌ ಅಭಿಪ್ರಾಯಪಟ್ಟರು. ನಗರದ ಪಿ.ಕೆ.ಕಾಲೋನಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ನಗರಸಭೆ ಸತ್ಯ ಎಂಎಎಸ್‌ ಫೌಂಡೇಶನ್‌ ವತಿಯಿಂದ ಆಯೋಜಿಸಿದ್ದ ಬಡಾವಣೆ ಸ್ವತ್ಛತೆ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಪೌರ ಕಾರ್ಮಿಕರ ಕಾಲೋನಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗಾಂಧೀಜಿಯವರ ಕನಸನ್ನು ನನಸು ಮಾಡಲು ಪಣತೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಗಾಂಧೀಜಿಯವರು ದಲಿತ ಕೇರಿಗಳಿಗೆ ಭೇಟಿ ನೀಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿದ್ದರು. ಅವರ ಆದರ್ಶಗಳಿಗೆ ಸೇವಾ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೇಳಿದರು. ಮಕ್ಕಳನ್ನು ಕೂಲಿ ಕೆಲಸಕ್ಕೆ ಹಚ್ಚದೆ ವಿದ್ಯಾಭ್ಯಾಸ ಕೊಡಿಸುವತ್ತ ಚಿಂತಿಸಬೇಕಿದ್ದು ಕುಡಿತದ ಚಟಕ್ಕಿಂಟಿಕೊಂಡವರು ಚಟ ಬಿಡುವ ಪ್ರತಿಜ್ಞೆ ಮಾಡಬೇಕೆಂದರು. 

ಸತ್ಯ ಫೌಂಡೇಶನ್‌ ಅಧ್ಯಕ್ಷ ಸತ್ಯಪ್ಪ, ಪೌರಕಾರ್ಮಿಕ ಮಕ್ಕಳು ಮೂಲ ವೃತ್ತಿಯನ್ನು ಬಿಟ್ಟು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬೇಕೆಂದರು. ಪೌರಕಾರ್ಮಿಕರ ಮಕ್ಕಳು ಐಎಎಸ್‌, ಐಪಿಎಸ್‌ ಸ್ಪರ್ಧಾತ್ಮಕ ಹುದ್ದೆಗಳಿಗೆ ಹೋಗುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬೇಕು. ಪ್ರಪಂಚದಲ್ಲಿ ಎಲ್ಲಾ ಮಹಿಳೆಯರಿಗೂ ಎಲ್ಲಾ ಕ್ಷೇತ್ರಗಳಲ್ಲೂ ಸಮಾನತೆ ದೊರೆಯಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯ ಎಚ್‌.ಮಹದೇವ್‌, ಆರೋಗ್ಯಾಧಿಕಾರಿ ಸತೀಶ್‌, ಮೋಹನ್‌, ಪುರಸಭಾ ಮಾಜಿ ಸದಸ್ಯ ವರದರಾಜು, ಟಿಂಬರ್‌ ಮರ್ಚೆಂಟ್‌ ಅಸೋಷಿಯೇಶನ್‌ ಅಧ್ಯಕ್ಷ ದೇವರಾಜು, ಪುಸಭಾ ಮಾಜಿ ಅಧ್ಯಕ್ಷ ಚಂದ್ರನಾಯ್ಕ, ರೈತ ಸಂಘದ ಅಧ್ಯಕ್ಷ ಬೆಟ್ಟೇಗೌಡ, ಜಿಲ್ಲಾಧ್ಯಕ್ಷ ಹೊಸೂರು ಕೃಷ್ಣಕುಮಾರ್‌, ಪರಿಸರ ಎಂಜಿನಿಯರ್‌ ರವಿಕುಮಾರ್‌ ಮಾತನಾಡಿದರು.

ಕಾಲೋನಿ ಮುಖಂಡ ಕುಮಾರ್‌, ಚಿಕ್ಕಯಜಮಾನ ವೀರಯ್ಯ, ಕಾರ್ಯದರ್ಶಿ ಮಣಿಕಂಠ, ಸಫಾಯಿ ಕರ್ಮಚಾರಿ ಮಹಿಳಾ ಸಂಘದ ಅಧ್ಯಕ್ಷೆ ಬನ್ನಮ್ಮ, ಗುತ್ತಿಗೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ಎಚ್‌.ಸಿ.ಮಾದ, ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮುರುಗೇಶ, ಪೌರಕಾರ್ಮಿಕರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ.ಎಚ್‌.ರಾಮ, ಶಾಂತಮ್ಮ, ಪಾರ್ವತಿ ಮತ್ತಿತರರಿದ್ದರು.

Advertisement

ಕಾಲೋನಿ ಮಕ್ಕಳ ಶಿಕ್ಷಣಕ್ಕಾಗಿ ಈಗಾಗಲೇ ಶಾಸಕ ಮಂಜುನಾಥ್‌ರೊಂದಿಗೆ ಚರ್ಚಿಸಿದ್ದೇನೆ. ದೇವಸ್ಥಾನದ ಜಾಗದಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗುವುದು, ಸಂಜೆ ವೇಳೆ ಇತರೆ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡಲಾಗುವುದು.
-ಕೆ.ಲಕ್ಷ್ಮಣ್‌, ನಗರಸಭೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next