ಕನ್ನಡ ಚಿತ್ರರಂಗದಲ್ಲಿ ಉತ್ಸಾಯಿ ನವ ಯುವಕರ ತಂಡವೇ ಹೆಚ್ಚಾಗುತ್ತಿದ್ದು, ಹೊಸಬರ ಸಿನಿಮಾಗಳು ಒಂದರ ಹಿಂದೆ ಒಂದು ಬರುತ್ತಿದೆ. ಆ ಸಾಲಿಗೆ ನಿರ್ದೇಶಕ ವೈಕೆ ಅವರ “ಗಿಲ್ಕಿ’ ಸಿನಿಮಾ ಕೂಡಾ ಸೇರಿದೆ.
ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ವೇದಿಕೆಯಲ್ಲಿ “ಗಿಲ್ಕಿ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಒಂದು ವಿಭಿನ್ನ ಪ್ರೇಮ ಕಥೆಯಾದ ಗಿಲ್ಕಿ, ಮನಮಿಡಿಯುವ ಡೈಲಾಗ್ ಹಾಗೂ ಪಾತ್ರಗಳಿಂದ ಪ್ರೇಕ್ಷಕರನ್ನು ಸೆಳೆಯುವಂತಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವೈಕೆ ಅಲಿಯಾಸ್ ಸುನೀಲ್ ಕುಮಾರ್ “ಚಿತ್ರದಲ್ಲಿನ ಪ್ರಮುಖ ಪಾತ್ರಗಳು ಮಾನಸಿಕ ಅಸ್ವಸ್ಥ, ಅಂಗವಿಕಲ ಹಾಗೂ ಅಂಧನನಾಗಿರು ತ್ತ ವೆ. ಈ ಮೂರೂ ಮನುಷ್ಯನ ಭಾವನೆಗಳನ್ನು ಕೆದಕುವ ಪಾತ್ರಗಳಾಗಿವೆ. ಸಿನಿಮಾ ನೋಡಿದ ಪ್ರೇಕ್ಷಕ ಕನಿಷ್ಠ ಒಂದು ವಾರ ಆ ಪಾತ್ರಗಳ ನೆನಪಿನಲ್ಲೇ ಸಾಗುತ್ತಾನೆ. ಈ ಮೂರು ವಿಭಿನ್ನ ಜೀವಿಗಳು ಸೇರಿ ಬದುಕನ್ನು ಕಟ್ಟಿಕೊಳ್ಳುವ ಕಥೆಯೇ ಚಿತ್ರದ ತಿರುಳು’ ಎಂದರು.
ಇದನ್ನೂ ಓದಿ:ಕೆಜಿಎಫ್-2 ಡಬ್ಬಿಂಗ್ ಮಾಡಿದ ರವೀನಾ ಟಂಡನ್
ಚಿತ್ರದ ವಿತರಕ ಹೊಣೆ ಹೊತ್ತಿರುವ “ಸತ್ಯ ಸಿನಿ ಕ್ರಿಯೇಷನ್ಸ್’ನ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಹಾಗೂ ಡಿ ಮಂಜುನಾಥ್ ಅವರ ವಿತರಣೆಯ ಎರಡನೇ ಚಿತ್ರ ಇದಾಗಿದೆ. ಚಿತ್ರದ ಕುರಿತು ಮಾತನಾಡಿದ ಸತ್ಯ ಪ್ರಕಾಶ್, “ನಾವು ಚಿತ್ರಗಳನ್ನು ನೋಡಿ ಆನಂತರ ವಿತರಣೆ ಬಗ್ಗೆ ಯೋಚಿಸುತ್ತೇವೆ. “ಗಿಲ್ಕಿ ’ ಒಂದು ಪ್ರೇಮ ಕಥೆಯಾದರೂ ವಿಭಿನ್ನವಾಗಿದೆ. ಇವರ ಪ್ರಯತ್ನ, ನೂತನ ವಿಚಾರ ಇಷ್ಟವಾಯಿತು’ ಎಂದರು.
ಫೆಬ್ರವರಿ 18 ಕ್ಕೆ ತೆರೆ ಕಾಣುತ್ತಿರುವ ಚಿತ್ರಕ್ಕೆ, ಎ.ಎಸ್ ಕಾಮಧೇನು ಫಿಲ್ಮಂಸ್ ನ ನರಸಿಂಹ ಕುಲಕರ್ಣಿ ನಿರ್ಮಾಣ, ಸುನೀಲ್ ಕುಮಾರ್ ನಿರ್ದೇಶನ, ಆದಿಲ್ ನಡಾಫ್ ಅವರ ಸಂಗೀತ ಸಂಯೋಜನೆ, ಕೆಂಪರಾಜು ಅವರ ಸಂಕಲನ, ವಾಸುಕಿ ಅವರ ಸಾಹಿತ್ಯ ಚಿತ್ರಕ್ಕಿದೆ. ತಾರಕ್, ಚೈತ್ರಾ ಆಚಾರ್, ಮೈಸೂರು ಗೌತಮ್, ಸಿತಾರ ತಾರಬಳಗವಿದೆ.