ಮಾಸ್ಕೋ: ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ, ಬಳಿಕ ಜೈಲು ಶಿಕ್ಷೆಗೆ ಹೆದರಿ ರಷ್ಯಾದಲ್ಲಿ ಆಶ್ರಯ ಪಡೆದಿರುವ ಮಾಹಿತಿದಾರ ಎಡ್ವರ್ಡ್ ಸ್ನೋಡೆನ್‌ಗೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ.
ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಷ್ಯಾವು, ಟ್ರಂಪ್‌ಗೆ ಉಡುಗೊರೆಯಾಗಿ ಸ್ನೋಡೆನ್‌ರನ್ನು ಹಸ್ತಾಂತರಿಸಲು ಚಿಂತನೆ ನಡೆಸುತ್ತಿದೆ. ಹೀಗೆಂದು ಅಮೆರಿಕದ ಇಬ್ಬರು ಪ್ರಮುಖ ಅಧಿಕಾರಿಗಳು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಜತೆ ಸ್ನೇಹ ಸಾಧಿಸಿರುವ ಪುಟಿನ್ ಆಡಳಿತವು, ಸ್ನೋಡೆನ್‌ರನ್ನು ಹಸ್ತಾಂತರಿಸುವ ಮೂಲಕ ಟ್ರಂಪ್‌ರ ಒಲವು ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಈ ಹಿಂದೆಯೇ ಟ್ರಂಪ್ ಅವರು, “ಸ್ನೋಡೆನ್ ಒಬ್ಬ ಭಯಾನಕ ದ್ರೋಹಿ. ಆತನು ನಮ್ಮ ಕೈಗೆ ಸಿಕ್ಕಿದರೆ ಗಲ್ಲಿಗೇರಿಸುತ್ತೇವೆ,’ ಎಂದಿದ್ದರು. ಹೀಗಾಗಿ, ಈಗ ರಷ್ಯಾ ಸ್ನೋಡೆನ್‌ರನ್ನು ಅಮೆರಿಕಕ್ಕೆ ಒಪ್ಪಿಸಿದರೆ, ಮರಣದಂಡನೆ ಅಲ್ಲದಿದ್ದರೂ ಜೈಲು ಶಿಕ್ಷೆಯಂತೂ ಖಚಿತವಾಗಲಿದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ, ಬಳಿಕ ಜೈಲು ಶಿಕ್ಷೆಗೆ ಹೆದರಿ ರಷ್ಯಾದಲ್ಲಿ ಆಶ್ರಯ ಪಡೆದಿರುವ ಮಾಹಿತಿದಾರ ಎಡ್ವರ್ಡ್ ಸ್ನೋಡೆನ್‌ಗೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ.