Advertisement

BRICS Meet: ಅ.22ಕ್ಕೆ ಬ್ರಿಕ್ಸ್‌ ಶೃಂಗ: 2ನೇ ಬಾರಿಗೆ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ

03:16 AM Oct 19, 2024 | Team Udayavani |

ಹೊಸದಿಲ್ಲಿ: 16ನೇ ಬ್ರಿಕ್ಸ್‌ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅ.22ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ರಷ್ಯಾದ ಕಜಾನ್‌ನಲ್ಲಿ 2 ದಿನಗಳ ಕಾಲ ಸಭೆ ನಡೆಯಲಿದ್ದು, ಇದು ಈ ವರ್ಷದಲ್ಲಿ ರಷ್ಯಾಕ್ಕೆ ಮೋದಿ ಅವರ 2ನೇ ಭೇಟಿ ಆಗಿರಲಿದೆ.

Advertisement

ಶೃಂಗಸಭೆ ಬಳಿಕ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಜತೆಗೆ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ಯನ್ನೂ ನಡೆಸಲಿದ್ದಾರೆ. ಈ ವರ್ಷದ ಬ್ರಿಕ್ಸ್‌ ಶೃಂಗವು “ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯ ಬೆಂಬಲಕ್ಕೆ ಬಲ’ ಎಂಬ ವಿಷಯದಲ್ಲಿ ಸಭೆ ನಡೆಸುತ್ತಿದ್ದು, ಬ್ರಿಕ್ಸ್‌ ನಾಯಕರು ಹಲವು ಜಾಗತಿಕ ಸಮಸ್ಯೆಗಳನ್ನೂ ಈ ವೇಳೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬ್ರಿಕ್ಸ್‌ ಪಾಶ್ಚಾತ್ಯ ವಿರೋಧಿ ಅಲ್ಲ- ಪುತಿನ್‌:
“ಬ್ರಿಕ್ಸ್‌ ಪಾಶ್ಚಾತ್ಯ ರಾಷ್ಟ್ರಗಳ ವಿರೋಧಿ ಬಣವಲ್ಲ, ಅದರಂತೆ ಬ್ರಿಕ್ಸ್‌ ಶೃಂಗ ಎಂದಿಗೂ ಯಾರ ವಿರುದ್ಧವೂ ನಿಲ್ಲಲು ಯೋಜಿಸಿಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಹೇಳಿದ್ದಾರೆ.

ಭಾರತೀಯ ಸಿನೆಮಾಗಳು ಹೆಚ್ಚು ಚಿತ್ರೀಕರಣವಾಗಿ ರುವುದು ರಷ್ಯಾದಲ್ಲೇ, ಇಲ್ಲಿ ಭಾರತೀಯ ಸಿನೆಮಾಗಳಿಗೆ ಅಭಿಮಾನಿ ಬಳಗವಿದೆ. ಅದಕ್ಕಾಗಿ ಪ್ರತ್ಯೇಕ ಟಿವಿ ಚಾನೆಲ್‌ ಕೂಡ ಇದೆ ಎಂದೂ ಪುತಿನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next