ಮುಂಬಯಿ: ಕನ್ನಡ ವೆಲ್ಫೇರ್ ಸೊಸೈಟಿ ಸುವರ್ಣ ಮಹೋ ತ್ಸವ ಸಂಭ್ರಮದಲ್ಲಿರುವುದು ನಮ ಗೆಲ್ಲರಿಗೂ ಹೆಮ್ಮೆಯ ವಿಷಯ. ಅದರ ಜತೆಗೆ ಪ್ರಸ್ತುತ ಯುವ ವಿಭಾಗವನ್ನು ಸ್ಥಾಪಿಸಿ ಚಾಲನೆ ನೀಡಿರುವುದು ಸಂಸ್ಥೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಇಂದು ಹುಟ್ಟಿಕೊಂಡ ಯುವ ವಿಭಾಗವು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ. ಯುವ ಪೀಳಿಗೆ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದು ಮುಂದುವರಿಯುವತ್ತ ಮನಸ್ಸು ಮಾಡಬೇಕು. ಯುವ ವರ್ಗವು ಸಂಸ್ಥೆಯ ಬೆನ್ನೆಲುಬಾಗಿ ಕಾರ್ಯ ನಿರ್ವ ಹಿಸಬೇಕು ಎಂದು ಯುವ ರಂಗನಟಿ, ಪತ್ತನಾಜೆ ತುಳು ಚಿತ್ರದ ನಾಯಕಿ ರೇಷ್ಮಾ ಶೆಟ್ಟಿ ಅವರು ನುಡಿದರು.
ನ. 18ರಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇದರ ಮಹೇಶ್ ಶೆಟ್ಟಿ ಬಾಬಾಗ್ರಪ್ ಸಭಾ ಗೃಹದಲ್ಲಿ ನಡೆದ ಕನ್ನಡ ವೆಲ್ಫೆàರ್ ಸೊಸೈಟಿ ಇದರ ನೂತನ ಯುವ ವಿಭಾಗದವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಇದೊಂದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಸಂಘದ ಸಿದ್ಧಿ-ಸಾಧನೆಗಳನ್ನು ಕಂಡಾಗ ಬಹಳಷ್ಟು ಹೆಮ್ಮೆಯಾಗುತ್ತಿದೆ. ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಯುವ ವಿಭಾಗ ಸ್ಥಾಪನೆಗೊಂಡಿರು ವುದು ಮತ್ತಷ್ಟು ಬಲ ಬಂದಂತಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇದರ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು ಮಾತನಾಡಿ, ಸಂಸ್ಥೆಯು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವಾಗ ಯುವ ವರ್ಗದ ರಚನೆಯಾಗಿದೆ. ನಿಜವಾಗಿಯೂ ಸಂಸ್ಥೆಗೆ ಇದರ ಅಗತ್ಯವಿತ್ತು. ನೇಮಕಗೊಂಡ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ತಮ್ಮ ಪಾಲಿಗೆ ದಕ್ಕಿದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕು. ನೂತನ ಸಮಿತಿಯ ಎಲ್ಲಾ ಸದಸ್ಯರಿಗೂ ಶುಭಹಾರೈಸಿ, ಸದಸ್ಯರೆಲ್ಲರೂ ಶಿಸ್ತು ಮತ್ತು ಸಂಯಮವನ್ನು ಪಾಲಿಸಿಕೊಂಡು ಸಂಘದ ಧ್ಯೇಯೋದ್ದೇಶಗಳಿಗೆ ಬದ್ಧ ರಾಗಿರಬೇಕು. ಯುವ ವಿಭಾಗದ ಮುಂದಿನ ಕಾರ್ಯಕ್ರಮಗಳಿಗೆ ಸಂಘದ ಸಹಕಾರ ಸದಾಯಿದೆ ಎಂದು ನುಡಿದರು.
ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆ ಗೊಂಡ ಪ್ರಿಯಾ ಶೆಟ್ಟಿ ಅವರು ಮಾತನಾಡಿ, ನನಗೆ ಈ ರೀತಿಯ ಒಂದು ಅವಕಾಶ ದೊರೆತಿರುವುದು ಸಂತೋಷವಾಗುತ್ತಿದೆ. ಸುಮಾರು 25 ಯುವಕ-ಯುವತಿಯನ್ನು ನಾನು ಈಗಾಗಲೇ ಒಗ್ಗೂಡಿಸಿದ್ದೇನೆ ಎನ್ನಲು ಹೆಮ್ಮೆಯಾಗುತ್ತಿದೆ. ಹಾಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯರನ್ನು ವಿಭಾಗಕ್ಕೆ ಸೇರಿಸಿ ಕೊಳ್ಳಲು ಶ್ರಮಿಸುತ್ತೇನೆ. ನಮ್ಮ ಎಲ್ಲ ಕಾರ್ಯಕ್ರಮಗಳಲ್ಲೂ ಎಲ್ಲರ ಒಮ್ಮತದ ಸಹಕಾರವಿರಲಿ. ಸಂಘದ ಪದಾ ಧಿಕಾರಿಗಳ ಮಾರ್ಗದರ್ಶನ ನಮಗೆ ಸದಾಯಿರಲಿ ಎಂದು ನುಡಿದರು.
ಯುವ ವಿಭಾಗದ ಸಂಯೋಜಕಿ ಡಾ| ಪಲ್ಲವಿ ಶೆಟ್ಟಿ ಅವರು ಮಾತನಾಡಿ, ಯುವ ವಿಭಾಗದಿಂದ ಮುಂದಿನ ದಿನಗಳಲ್ಲಿ ಉತ್ತಮ ಸಮಾಜಪರ ಸೇವಾ ಕಾರ್ಯಗಳು ನಡೆದು ಎಲ್ಲರ ಮನಸ್ಸನ್ನು ಗೆಲ್ಲುವಂತಾಗಬೇಕು. ಸಂಸ್ಥೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸುವಲ್ಲಿ ಯುವ ವಿಭಾಗದ ಯೋಗದಾನ ಸ್ಮರಣೀಯವಾಗುವಂತಾಗಲಿ ಎಂದು ನುಡಿದು ಸಂಸ್ಥೆಗೆ ಶುಭಹಾರೈಸಿದರು.
ವೀಣಾ ಎಂ. ಶೆಟ್ಟಿ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ವೇದಿಕೆ ಯಲ್ಲಿ ರೇಷ್ಮಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ಹರೀಶ್ ಎಂ. ಶೆಟ್ಟಿ, ಯುವ ವಿಭಾಗದ ಸಂಚಾಲಕಿ ಡಾ| ಪಲ್ಲವಿ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರುಗಳಾದ ಎಸ್. ಕೆ. ಸೊರಪ, ಪೆರಿಯಣ್ಣ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ರಘುನಾಥ್ ಶೆಟ್ಟಿ, ಶಾಂತಾ ಎನ್. ಶೆಟ್ಟಿ, ಜಯಂತಿ ಆರ್. ಮೊಲಿ, ಮನೋಹರ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಪ್ರವೀಣಾ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.