Advertisement
ದ.ಕ. ಜಿಲ್ಲೆಯಲ್ಲಿ ರೈಲ್ವೇ ಮೂಲಸೌಕರ್ಯದ ಅಭಿವೃದ್ಧಿ, ಕಾರ್ಯಾಚರಣೆಯಲ್ಲಿ ಸುಧಾರಣೆ ಹಾಗೂ ರೈಲು ಸೇವೆಗಳಿಗೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಪಾಲಕ್ಕಾಡ್ ವಿಭಾಗ, ಮೈಸೂರು ವಿಭಾಗ ಮತ್ತು ಕೊಂಕಣ ರೈಲ್ವೇ ಅಧಿಕಾರಿಗಳೊಂದಿಗೆ ಶನಿವಾರ ಜಿ.ಪಂ. ಸಭಾಂಗಣ ದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ನಡುವಿನ ರೈಲನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಿಸುವ ಸಂಬಂಧ ಈಗಾಗಲೇ ಬೇಡಿಕೆಗಳು ಬರುತ್ತಿದ್ದು, ಸುಬ್ರಹ್ಮಣ್ಯದ ವರೆಗಿನ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಮೆಮು ರೈಲು ಸಂಚಾರಕ್ಕೆ ಇರುವ ಅವಕಾಶಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಡಿಆರ್‌ಎಂ ವಿಜಯಾ ತಿಳಿಸಿದರು.
Related Articles
ಮಂಗಳೂರು ಜಂಕ್ಷನ್, ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳನ್ನು ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಪಡಿಸಗುತ್ತಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಂಸದರಿಗೆ ವಿವರಿಸಿದರು.
ಸೆಂಟ್ರಲ್‌ಗೆ ಹೆಚ್ಚು ರೈಲು; ಪರಿಶೀಲನೆ
ಮಂಗಳೂರು ಸೆಂಟ್ರಲ್‌ನಲ್ಲಿ 4, 5ನೇ ಪ್ಲಾಟ್‌ಫಾರ್ಮ್ ನಿರ್ಮಾಣವಾಗಿ ರುವುದರಿಂದ ಜಂಕ್ಷನ್ ವರೆಗೆ ಬರುವ ನಾಲ್ಕು ರೈಲುಗಳನ್ನು ಸೆಂಟ್ರಲ್‌ಗೆ ವಿಸ್ತರಿಸಬೇಕು ಎನ್ನುವ ಬೇಡಿಕೆಯನ್ನು ಹೋರಾಟಗಾರರು ಅಧಿಕಾರಿಗಳ ಮುಂದೆ ಇರಿಸಿದರು. ಪಾಲಕ್ಕಾಡ್ ವಿಭಾಗದ ಡಿಆರ್‌ಎಂ ಅರುಣ್ ಕುಮಾರ್ ಚತುರ್ವೇದಿ ಪ್ರತಿಕ್ರಿಯಿಸಿ, ಈ ಬೇಡಿಕೆಗಳು ಈಗಾಗಲೇ ನಮ್ಮ ಗಮನಕ್ಕೆ ಬಂದಿವೆ. ಅವಕಾಶಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
Advertisement
ಫರಂಗಿಪೇಟೆ ನಿಲ್ದಾಣ ಅಭಿವೃದ್ಧಿ ಬೇಡಿಕೆ
ಫರಂಗಿಪೇಟೆ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ ಮತ್ತೆ ಆರಂಭಿಸಬೇಕು ಮತ್ತು ಕ್ರಾಸಿಂಗ್ ಸ್ಟೇಷನ್ ಮಾಡಬೇಕು ಎಂದು ರೈಲ್ವೇ ಹೋರಾಟಗಾರರು ಬೇಡಿಕೆ ಇಟ್ಟರು. ವಿವಿಧ ಕಾಲೇಜುಗಳಿಗೆ ಹತ್ತಿರವಿರುವ ಸ್ಥಳವಾಗಿದ್ದು, ನಿಲ್ದಾಣ ಕೂಡ ಹೆದ್ದಾರಿಗೆ ಹೊಂದಿಕೊಂಡೇ ಇದೆ. 30 ಎಕರೆ ಖಾಲಿ ಜಾಗವಿದ್ದು, ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ಕೊಂಕಣ ರೈಲ್ವೇಯ ಹಿರಿಯ ಪ್ರಾದೇಶಿಕ ನಿಯಂತ್ರಣಾಧಿಕಾರಿ ವಿನಯ ಕುಮಾರ್, ಪಾಲಕ್ಕಾಡ್ ವಿಭಾಗದ ಎಡಿಆರ್‌ಎಂ ಜಯಕೃಷ್ಣನ್, ಸ್ಮಾರ್ಟ್ ಸಿಟಿ, ಎನ್‌ಎಚ್‌ಎಐ, ಪಿಡಬ್ಲೂ$Âಡಿ ಅಧಿಕಾರಿಗಳು, ಮನಪಾ ಸದಸ್ಯರು, ರೈಲ್ವೇ ಬಳಕೆದಾರರ ಸಂಘದ ಪ್ರಮುಖರಾದ ಅನಿಲ್ ಹೆಗ್ಡೆ, ಜಿ.ಕೆ. ಭಟ್, ರವೀಶ್, ಲಕ್ಷ್ಮೀನಾರಾಯಣ ಬಂಟ್ವಾಳ, ಮುರಳೀಧರ ಕೆದಿಲಾಯ, ಜಯಕೃಷ್ಣನ್, ಜೆರಾರ್ಡ್ ಟವರ್ ಮೊದಲಾದವರಿದ್ದರು.ಹಿರಿಯ ಅಧಿಕಾರಿ ಮಾಣಿಕ್ಯ ಸ್ವಾಗತಿಸಿದರು. ಹಿರಿಯ ಅಧಿಕಾರಿಗಳು ಗೈರು
ದ.ಕ. ಜಿಲ್ಲೆಗೆ ಸಂಬಂಧ ಪಟ್ಟಂತೆ ಮೈಸೂರು, ಪಾಲಕ್ಕಾಡ್ ಮತ್ತು ಕೊಂಕಣ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೇ ಪ್ರಬಂಧಕರ (ಡಿಆರ್‌ಎಂ)ಗಳ ಸಭೆಯನ್ನು ಸಂಸದರು ಕರೆದಿದ್ದರು. ಸಭೆಗೆ ಪಾಲಕ್ಕಾಡ್ ಡಿಆರ್‌ಎಂ ಸಂಪೂರ್ಣ ತಂಡದೊಂದಿಗೆ ಹಾಜರಾಗಿದ್ದರೆ, ಮೈಸೂರಿನಿಂದ ಎಡಿಆರ್‌ಎಂ, ಕೊಂಕಣ ರೈಲ್ವೇಯಿಂದ ರೀಜನಲ್ ಟ್ರಾಫಿಕ್ ಮ್ಯಾನೇಜರ್ ಹೀಗೆ ಕೆಳಹಂತದ ಮಾತ್ರ ಅಧಿಕಾರಿಗಳು ಹಾಜರಾಗಿದ್ದರು. ಚರ್ಚಿತ ಇತರ ವಿಷಯಗಳು
– ಬಂಟ್ವಾಳ ರೈಲು ನಿಲ್ದಾಣ ಅಕ್ರಮ ಚಟುವಟಿಕೆಗಳ ತಾಣ ವಾಗಿದ್ದು, ಪೊಲೀಸ್ ನಿಗಾ ಅಗತ್ಯ
– ಅಡ್ಯಾರ್ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ನಲ್ಲಿ ರಾತ್ರಿ ವೇಳೆಯೂ ಗಾರ್ಡ್ ನಿಯೋಜನೆ
– ಮಂಗಳೂರು ಸೆಂಟ್ರಲ್ 4-5ನೇ ಪ್ಲಾಟ್‌ಫಾರ್ಮ್ಗೆ ಶೀಘ್ರ ಮೂಲಸೌಕರ್ಯ
-ಮಂಗಳೂರು ಜಂಕ್ಷನ್-ಸೆಂಟ್ರಲ್ ನಡುವಿನ 1 ಕಿ.ಮೀ. ಹಳಿ ದ್ವಿಗುಣ
-ಮಂಗಳೂರು ಸುಬ್ರಹ್ಮಣ್ಯ ನಡುವೆ ವೇಗ ಮಿತಿ ಹೆಚ್ಚಳ
– ರೈಲು ಹಳಿಯಿಂದ 15 ಮೀ. ಪ್ರದೇಶದಲ್ಲಿ ಸಾರ್ವಜನಿಕ ಅಭಿವೃದ್ಧಿಗೆ ಅವಕಾಶವಿಲ್ಲ.
– ಮಹಾಕಾಳಿಪಡು³ ಅಂಡರ್‌ಪಾಸ್ ಮೇ ತಿಂಗಳೊಳಗೆ ಪೂರ್ಣ
– ತೋಕೂರು ಅಂಡರ್‌ಪಾಸ್ ನಿರ್ಮಾಣವಾದರೂ ಉಪಯೋಗಕ್ಕಿಲ್ಲ.
– ಸೆಂಟ್ರಲ್ ನಿಲ್ದಾಣದ ಮುಂಭಾಗ ಟ್ಯಾಕ್ಸಿ ಪಾರ್ಕಿಂಗ್‌ಗೆ ಅವಕಾಶ ಬೇಕು.
– ಕಬಕ ಪುತ್ತೂರು ರೈಲು 9 ಗಂಟೆಯೊಳಗೆ ಸೆಂಟ್ರಲ್ ತಲುಪುವಂತಾಗಬೇಕು. ಗಮನ ಸೆಳೆದ
“ಉದಯವಾಣಿ’ ವರದಿ
ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ “ಹಳೇ ಬೇಡಿಕೆಗಳು ಕೂಡಲೇ ಈಡೇರಲಿ’ ಎಂದು “ಉದಯವಾಣಿ’ಯಲ್ಲಿ ಶನಿವಾರ ಪ್ರಕಟವಾಗಿದ್ದ ವರದಿಯಲ್ಲಿ ಉಲ್ಲೇಖವಾಗಿದ್ದ ಪ್ರಯಾಣಿಕರ ಹಲವು ಬೇಡಿಕೆಗಳು ಸಭೆಯಲ್ಲಿ ಪ್ರಸ್ತಾವವಾದವು. ಮಂಗಳೂರು ಸೆಂಟ್ರಲ್‌ಗೆ ಹೆಚ್ಚುವರಿ ರೈಲು, ಸುಬ್ರಹ್ಮಣ್ಯಕ್ಕೆ ಪ್ಯಾಸೆಂಜರ್ ರೈಲು ವಿಸ್ತಣೆ, ಎಡಮಂಗಲ ಪೇಟೆಯಲ್ಲಿ ರೈಲ್ವೇ ಗೇಟ್‌ನಿಂದ ಸಮಸ್ಯೆ ಸಹಿತ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಬಳಕೆದಾರರು ಅಧಿಕಾರಿಗಳ ಗಮನ ಸೆಳೆದರು.