ಬೆಂಗಳೂರು: “ಹಸಿರು ಬೆಂಗಳೂರು’ ಕಲ್ಪನೆಯೊಂದಿಗೆ ನಗರದಾದ್ಯಂತ 1 ಕೋಟಿ ಗಿಡ ನೆಡುವ ಅಭಿಯಾನ ನಡೆಸುತ್ತಿರುವ ಆದಮ್ಯಚೇತನ ಸಂಸ್ಥೆ ಇದೀಗ ನೆಟ್ಟ ಸಸಿಗಳ ಸಂರಕ್ಷಣೆ ಹಾಗೂ ಪಾಲನೆ ಉಸ್ತುವಾರಿ ನೋಡಿಕೊಳ್ಳಲು “ಟ್ರೀ ಟ್ರ್ಯಾಕಿಂಗ್ ಕಾರ್ಡ್’ ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.
ಸಂಸ್ಥೆಯ ವತಿಯಿಂದ ಪ್ರತಿ ಭಾನು ವಾರ ಗಿಡಗಳಿಗೆ ಟ್ರೀ ಟ್ರ್ಯಾಕಿಂಗ್ ಕಾರ್ಡ್ ಅಳವಡಿಸಲಾಗುತ್ತದೆ. ಇದರಲ್ಲಿ ಕೋಡ್ ಅಳವಡಿಸಲಾಗುತ್ತಿದ್ದು, ಸಾರ್ವಧಿಜನಿಕರು ಮೊಬೈಲ್‌ನಲ್ಲಿ ಈ ಕೋಡ್ ಸ್ಕ್ಯಾನ್ ಮಾಡಿದರೆ ಆ ಗಿಡ ನೆಟ್ಟ ದಿನಾಂಕ, ಸ್ಥಳ, ಅದನ್ನು ಉಸ್ತುವಾರಿ ನೋಡಿಕೊಳ್ಳುತ್ತಿರುವವರ ಮಾಹಿತಿ , ದೂರವಾಣಿ ಸಂಖ್ಯೆ, ಗಿಡದ ಸಂಪೂರ್ಣ ಮಾಹಿತಿ, ಅದರ ವಿಶೇಷಣಗಳ ಕುರಿತು ಮಾಹಿತಿ ಲಭ್ಯವಾಗಲಿದೆ.
ಅಲ್ಲದೆ ಗಿಡದ ಬೆಳವಣಿಗೆಗೆ ಅಗತ್ಯವಾದ ಅಂಶಗಳು, ಗಿಡ ಯಾವ ಹಂತದಲ್ಲಿದೆ, ಗಿಡದ ಬೆಳವಣಿಗೆಗೆ ತೊಂದರೆ ಉಂಟಾಗಿಧಿದೆಯೇ ಎಂಬ ಮಾಹಿತಿಯೂ ಸಂಸ್ಥೆಗೆ ಸಿಗಲಿದ್ದೂ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಸೋಮವಾರ ಕೆಂಪೇಗೌಡನಗರದ ಅದಮ್ಯ ಚೇತನಾ ಸಂಸ್ಥೆಯ ಕಚೇರಿಧಿಯಲ್ಲಿ ಈ ಹೊಸ ಪ್ರಯೋಗದ “ಟ್ರೀ ಟ್ರ್ಯಾಕಿಂಗ್ ಕಾರ್ಡ್’ನ್ನು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಧಿಕುಮಾರ್ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, “ದೇಶದಲ್ಲಿ ಮೊದಲ ಬಾರಿಗೆ ಗಿಡಗಳಿಗೂ ಗುರುತಿನ ಚೀಟಿ ಅಳವಡಿಸುತ್ತಿರುವ ಸಂಸ್ಥೆಯ ಯೋಜನೆ ಶ್ಲಾಘನೀಯ. ಇದೇ ಮಾದರಿಯಲ್ಲಿ ನಗರ ಪ್ರದೇಶಗಳಲ್ಲಿ ರುವ ಎಲ್ಲ ಮರ-ಗಿಡಗಳ ಸಂಪೂರ್ಣ ಮಾಹಿತಿ ಲಭ್ಯವಿರುವ ಹಾಗೇ ಆಯಾ ನಗರ ಪಾಲಿಕೆಗಳು ಕ್ರಮ ವಹಿಸಿಕೊಳ್ಳಬೇಕು. ಇದರಿಂದ ಪರಿಸರ ಸಂರಕ್ಷಣೆ ಜೊತೆಗೆ ಗಿಡ, ಮರಗಳ ಕಡಿಯುವಿಕೆ ತಡೆಗಟ್ಟಲು ಸಾಧ್ಯವಾಗಲಿದೆ.
ಈ ವಿನೂತನ ಟ್ರೀ ಟ್ರ್ಯಾಕಿಂಗ್ ಮಾದರಿ ಅಳವಡಿಕೆ ಕುರಿತು ಕೇಂದ್ರ ಅರಣ್ಯ ಇಲಾಖೆ ಹಾಗೂ ಇತರೆ ರಾಜ್ಯಸರ್ಕಾರಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಅಲ್ಲದೆ ನಗರ ಪ್ರದೇಶಗಳಲ್ಲಿ ಭೂ ಮಾಫಿಯಾಗಳ ಅಟ್ಟಹಾಸದಿಂದ ಗಿಡ-ಮರಗಳು ಕಣ್ಮರೆಯಾಗುತ್ತಿವೆ. ಪರಿಸರ ಹಾಳು ಮಾಡಿ ಕಾಂಕ್ರೀಟ್ ಅಭಿವೃದ್ಧಿಯಾಗುತ್ತಿರುವುದು ಬೇಸರದ ಸಂಗತಿ. ಹೀಗಾಗಿ ಪ್ರತಿಯೊಬ್ಬ ನಾಗರಿಕರೂ, ಗಿಡಗಳನ್ನು ನೆಡುವ ಮೂಲಕ ಹಸಿರು ಭಾರತ ನಿರ್ಮಾಣ ಮಾಡಲು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಅದಮ್ಯ ಚೇತನಾ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಕಾರ್ಡ್‌ಧಿನಲ್ಲಿರುವ ಕೋಡ್ ನಂಬರ್‌ನ ಮೂಲಕ ಗಿಡಗಳ ಸಂರಕ್ಷಣೆ ಹಾಗೂ ಪಾಲನೆಗೆ ಸಹಕಾರಿಯಾಗಲಿದೆ. ಸಾರ್ವಜನಿಕರೂ ಈ ಗಿಡಗಳ ಸಂಪೂರ್ಣ ಮಾಹಿತಿ ಪಡೆದು, ಅದರ ರಕ್ಷಣೆ ಹಾಗೂ ಪಾಲನೆಧಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಹಲವು ಗಿಡಗಳಿಗೆ ಕಾರ್ಡ್ ಅಳವಡಿಸಲಾಗಿದೆ ಎಂದರು.