Advertisement
ಈಗ ಹೇಗಿದ್ದರೂ ಆಫಿಸ್‌ಗೆ ಹೋಗುವ ಜಂಜಾಟ ಇಲ್ಲ. ಹಾಗಾಗಿ, ಮನೆಯಲ್ಲಿ ತೊಡುವ ಉಡುಗೆಯನ್ನೇ ಎಲ್ಲರೂ ನೆಚ್ಚಿಕೊಂಡಿದ್ದಾರೆ. ಸ್ವೆಟ್ ಪ್ಯಾಂಟ್‌ಗಳನ್ನು ಧರಿಸಿದರೆ, ಕೆಲಸದಿಂದ ಬಿಡುವು ಸಿಕ್ಕಾಗಲೆಲ್ಲ ಅಲ್ಪ ಸ್ವಲ್ಪ ವ್ಯಾಯಾಮ ಮಾಡಬಹುದು. ಜಿಮ್, ಔಟ್ ಡೋರ್ ನ್ಪೋರ್ಟ್ಸ್ ಹಾಗೂ ಯೋಗಕ್ಕೆ ಹಾಕುವ ಉಡುಪುಗಳಿಗೆ, ಬೆವರನ್ನು ಹೀರಬಲ್ಲ ಗುಣವಿದೆ. ಯಾಕೆಂದರೆ, ಈ ಸ್ವೆಟ್ ಪ್ಯಾಂಟ್‌ಗಳು ಹತ್ತಿಯಿಂದ ಮಾಡಲ್ಪಟ್ಟಿರುತ್ತವೆ. ಈ ಉಡುಗೆ ಮೈಗೆ ಅಂಟುವುದಿಲ್ಲ ಕೂಡ! ಹಾಗಾಗಿ, ಎಷ್ಟೇ ಬೆವರಿದರೂ, ದೇಹದಿಂದ ದುರ್ವಾಸನೆ ಬರುವುದಿಲ್ಲ.
ಸ್ವೆಟ್ ಪ್ಯಾಂಟ್‌ಗಳನ್ನು ಟಿ – ಶರ್ಟ್, ಶರ್ಟ್, ಟ್ಯಾಂಕ್ ಟಾಪ್ಸ್, ಲೂಸ್ ಮೆಶ್ ಟಾಪ್, ಸ್ಪೋರ್ಟ್ಸ್ ಬ್ರಾ, ಕೋಲ್ದ್ ಶೋಲ್ಡರ್ ಟಾಪ್, ಸ್ವೆಟ್ ಶರ್ಟ್, ಇತ್ಯಾದಿಗಳ ಜೊತೆ ತೊಡಬಹುದು. ಲೇಸರ್ ಕಟ್ ಜಾಕೆಟ್, ಟ್ರ್ಯಾಕ್ ಜಾಕೆಟ್, ಲೇಯೆರಿಂಗ್ ಬಾಂಬರ್ ಜಾಕೆಟ್, ಪ್ಲೀಟೆಡ್ ಬ್ಯಾಕ್ ಜಾಕೆಟ್‌ಗಳನ್ನೂ ಇವುಗಳ ಜೊತೆ ತೊಡಬಹುದು ಅಥವಾ ಶ್ರಗ್, ಕೌಲ್ ನೆಕ್ ಹೂಡಿ, ಡಿಸ್ಟ್ರೆಸ್ಡ್ ಹೂಡಿ, ಸ್ಲಿವ್‌ಲೆಸ್ ಹೂಡಿ, ಕೋಟ್, ಕ್ರಾಪ್ ಟಾಪ್, ಜರ್ಸಿ ಜೊತೆಗೆ ಮ್ಯಾಚ್ ಮಾಡಿ, ಸ್ಟೈಲಿಶ್ ಆಗಿ ಕಾಣಿಸಬಹುದು ಸೆಲೆಬ್ರಿಟಿಗಳೂ ಮೆಚ್ಚಿದ್ದಾರೆ…
ಸೆಲೆಬ್ರಿಟಿಗಳು ಕೂಡಾ ಸ್ವೆಟ್ ಪ್ಯಾಂಟ್ಸ್ ಜೊತೆಗಿನ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅಭಿಮಾನಿಗಳಲ್ಲೂ ಈ ಟ್ರೆಂಡ್ ಹೆಚ್ಚುತ್ತಿದೆ. ನೀವೂ ಸ್ವೆಟ್ ಪ್ಯಾಂಟ್ಸ್ ನಲ್ಲಿ ವ್ಯಾಯಾಮ ಮಾಡುವ ಫೋಟೋವನ್ನು ಸ್ನೇಹಿತರೊಂದಿಗೆ ಹಂಚಿಕೊಂಡು, ಅವರಿಗೂ ಫಿಟ್‌ನೆಸ್ ಚಾಲೆಂಜ್ ಹಾಕಿ. ಯೋಗ, ವ್ಯಾಯಾಮ, ಕಸರತ್ತು, ನೃತ್ಯ ಮುಂತಾದವುಗಳಲ್ಲಿ ಆಸಕ್ತಿ ಮತ್ತು ಪ್ರಾವೀಣ್ಯತೆ ಇದ್ದವರು, ವಿಡಿಯೊ ಮೂಲಕ ಇತರರಿಗೆ ಕಲಿಸಿಕೊಡುತ್ತಿದ್ದಾರೆ. ವಿಡಿಯೋ ಟುಟೋರಿಯಲ್‌ಗಳಿಂದ ಸರಳ ವ್ಯಾಯಾಮಗಳನ್ನು ನೀವೂ ಕಲಿಯಬಹುದು. ಮತ್ಯಾಕೆ ತಡ, ಸ್ವೆಟ್ ಪ್ಯಾಂಟ್ ಗಳನ್ನು ಕಪಾಟಿನಿಂದ ಹೊರ ತೆಗೆಯಿರಿ. “ವರ್ಕ್‌ಔಟ್ ಮಾಡೋಕೆ ಟೈಮ್ ಇಲ್ಲ’ ಎನ್ನುವ ನೆಪಕ್ಕೆ ಟಾಟಾ ಹೇಳಿ.
Related Articles
Advertisement