Advertisement

ಸ್ವಚ್ಛ ಮೈಸೂರಿಗೆ ಎಲ್ಲರೂ ಕೈಜೋಡಿಸಿ

05:54 AM Jun 01, 2020 | Lakshmi GovindaRaj |

ಮೈಸೂರು: ನಗರಪಾಲಿಕೆ ಎಷ್ಟೇ ಕ್ರಮ ತೆಗೆದುಕೊಂಡರೂ, ಜನರು ಕಸ ವಿಂಗಡೆ ಮಾಡಿ ನೀಡುತ್ತಿಲ್ಲ. ಮುಂದಾದರೂ ಮೈಸೂರಿನ ಜನತೆ ಪಾಲಿಕೆಯೊಂದಿಗೆ ಕೈಜೋಡಿಸುವ ಮೂಲಕ ಸ್ವಚ್ಛ ಮೈಸೂರಿಗೆ ಕೈಜೋಡಿಸಬೇಕು ಎಂದು  ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ಪಾಲಿಕೆ ಆವರಣದಲ್ಲಿ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್‌  ಗಳಿಗೆ ಚಾಲನೆ ನೀಡಿ ಮಾತನಾಡಿ, ನಗರಪಾಲಿಕೆ ಸದಸ್ಯರ ಬಹುದಿನದ ಬೇಡಿಕೆಯನ್ನು ನಗರಪಾಲಿಕೆ ಈಡೇರಿಸಿದೆ. ಈ ನಿಟ್ಟಿನಲ್ಲಿ  ಮೈಸೂರು ಇನ್ನೂ ಸ್ವಚ್ಛವಾಗಡಲು ಸಹಕರಿಸಬೇಕು. ಜೆ.ಪಿ.ನಗರದ ಕಸ ಸಂಸ್ಕರಣಾ ಘಟಕಕ್ಕೆ ನಗರಾಭಿವೃದಿಟಛಿ ಸಚಿವರು, 4 ಕೋಟಿ 60 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದಾರೆ.

ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುತ್ತದೆ. 45 ಕಿ.ಮೀ. ವರ್ತುಲ ರಸ್ತೆ ಬೀದಿದೀಪಗಳ ಬಿಲ್‌ ಪಾವತಿ ಬಗ್ಗೆಯೂ ಸರ್ಕಾರ ನಿರ್ಧಾರ ಮಾಡಿದೆ. ಮುಡಾ ಎಷ್ಟು ಹಣ ಪಾವತಿಸಬೇಕು. ನಗರಪಾಲಿಕೆ ಎಷ್ಟು ಹಣ ಪಾವತಿಸಬೇಕೆಂದು ಸೂಚಿಸಲಾಗಿದೆ ಎಂದು  ಹೇಳಿದರು. ಮೇಯರ್‌ ತಸ್ನೀಂ ಮಾತನಾಡಿ, ತ್ಯಾಜ್ಯ ವಿಲೇವಾ ರಿಗೆ ವಾಹನಗಳ ಕೊರತೆ ಬಗ್ಗೆ ದೂರು ಬರುತ್ತಿತ್ತು.

ಈಗ ಒಟ್ಟು 65  ವಾಹನಗಳನ್ನು ಖರೀದಿಸಲಾಗಿದೆ. ಹಸಿ ಕಸ, ಒಣ ಕಸ ಬೇರೆ ಮಾಡಿ ಹಾಕುವ ವ್ಯವಸ್ಥೆ ಈ ವಾಹನದಲ್ಲಿದೆ.  ಜನರು ಕಸ ಕೊಡುವಾಗ ಹಸಿ ಹಾಗೂ ಒಣಕಸವನ್ನು ಬೇರೆ ಮಾಡಿಯೇ ಕೊಡಬೇಕು ಎಂದರು. ಮೈಸೂರು ಯೋಗಲಕ್ಷ್ಮೀ ಯೋಜನೆ  ಫ‌ಲಾನುಭವಿಗಳಿಗೆ 30 ಸಾವಿರ ರೂ.ಮೌಲ್ಯದ ಎಲ್ಐ‌ಸಿ ಬಾಂಡ್‌ ವಿತರಿಸಲಾಯಿತು. ನಗರಪಾಲಿಕೆ  ಆಯುಕ್ತ ಗುರುದತ್ತ ಹೆಗಡೆ, ಉಪ ಆಯುಕ್ತ ಶಶಿ ಕುಮಾರ್‌, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ಜಯಂತ್‌, ಡಿಸಿಪಿ ಪ್ರಕಾಶ್‌ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next