Advertisement

ಡಿಜಿಟಲ್‌ ಸೇವಾ ಸಿಂಧು ಕೇಂದ್ರ ಸೇವೆ ಪಡೆಯಿರಿ

10:29 AM Jan 22, 2022 | Team Udayavani |

ಮಾದನಹಿಪ್ಪರಗಿ: ಎಸ್‌ಕೆಡಿಆರ್‌ಡಿಪಿಯ ಕಾರ್ಯ ವಿಸ್ತರಿಸಲು ತಾಲೂಕಿನಾದ್ಯಂತ 23 ಕೇಂದ್ರಗಳು ಶುಕ್ರವಾರ ಉದ್ಘಾಟನೆಯಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಳಂದ ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಂಡಕಿ ಹೇಳಿದರು.

Advertisement

ಗ್ರಾಮದಲ್ಲಿ ಡಿಜಿಟಲ್‌ ಸೇವಾ ಸಿಂಧು ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸೇವಾ ಕೇಂದ್ರಗಳಲ್ಲಿ ಆಧಾರ ಕಾರ್ಡ್‌, ಪಾನ ಕಾರ್ಡ್‌, ವೋಟರ್‌ ಐಡಿ, ಆದಾಯ ಪ್ರಮಾಣ ಪತ್ರ, ಜಾತಿ ಸರ್ಟಿಫಿಕೇಟ್‌, ರೈತರಿಗೆ ಸಂಬಂಧಿಸಿದ ಪಹಣಿ, ಕೃಷಿಗೆ ಸಂಬಂಧಿಸಿದ ಪಿಎಂ ಕಿಸಾನ ಯೋಜನೆಯ ನಾಡಕಾರ್ಯಾಲಯದಲ್ಲಿ ಸಿಗುವ ನಾಗರಿಕ ಸೇವಾ ಸೌಲಭ್ಯಗಳು, ರೈಲ್ವೆ ಟಿಕೆಟ್‌ ಬಸ್‌ ಟಿಕೇಟ್‌, ಎಪಿಪಿವಾಯ್‌, ಮೊಬೈಲ್‌ ರಿಚಾರ್ಜ್‌, ವಿದ್ಯುತ್‌ ಬಿಲ್‌ ಮುಂತಾದ ಸರಕಾರದ ಸೇವೆಗಳನ್ನು ಶಿವಲಿಂಗೇಶ್ವರ ಮಠದ ಹತ್ತಿರ ಮತ್ತು ಶರಣನಗರದ ಸೇವಾ ಕೆಂದ್ರಗಳಲ್ಲಿ ಸೇವೆಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಡಿಜಿಟಲ್‌ ಸೇವಾ ಸಿಂಧು ಕೇಂದ್ರ ಉದ್ಘಾಟಿಸಿದ ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿ, ಸರ್ಕಾರಗಳು ಮಾಡುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮಾದನಹಿಪ್ಪರಗಿ ವಲಯ ಮೇಲ್ವಿಚಾರಕ ಪ್ರಮೋದ ಹೂಗಾರ, ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ತೋಳನೂರ, ಸೇವಾ ಪ್ರತಿನಿಧಿಗಳಾದ ಬನಶಂಕರಿ ಸಿಂಗಶೆಟ್ಟಿ, ಸುನಂದಾ ಕಂಬಾರ, ಶಾಂತಾಬಾಯಿ ಕೋಣದೆ, ಶಿವಮ್ಮ ಘಂಟೆ, ಮಹಾದೇವಿ ಅಂಜುಟಗಿ, ಸಂತೋಷಿ ಭೂಸನೂರ, ರಾಜೇಶ್ವರಿ ಹೆಬಳಿ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿನಾಥ ಮಾಸನಳ್ಳಿ, ಶಿವಲಿಂಗಪ್ಪ ಜಮಾದಾರ, ಮುಖಂಡರಾದ ಮಲ್ಲಿನಾಥ ದುದ್ದಗಿ, ಶರಣಬಸಪ್ಪ ಜಿಡ್ಡಿಮನಿ, ಬಮ್ಮನಿಂಗಪ್ಪ ಗೌಡಗಾಂವ್‌, ಮಾಣಿಕ ಮಾನೆ, ಮಹಾರುದ್ರ ಸೋನಾರ, ನಾಗರಾಜ ಗೌಡಗಾಂವ್‌, ಗಿರಿಶ ಸಕ್ಕರಗಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next