Advertisement
ಮೊದಲು ಒಂದೇ ಆಗಿದ್ದು ಆನಂತರದಲ್ಲಿ ಟಿಸಿಲೊಡೆದು ಹಲವು ಗುಂಪು- ಪಂಗಡವೇ ಆಗಿ ಹೋಗಿರುವ ಮನುಷ್ಯನಿಗೆ, ಮೂಲಪುರುಷನಿದ್ದಾನೆ ಎಂದು ಸಂಶೋಧನೆಗಳನ್ನು ನಡೆಸಿದಾಗ ನಮಗೆ ದೊರೆತ ಮೂಲವಸ್ತುವೇ “ಬ್ರಹ್ಮಕಣ’. ಇದರಿಂದಲೇ ಮಾನವನ ಸಂತತಿ ಬೆಳೆದುಬಂದಿದೆ. ಇದು ಜಗತ್ತಿನಲ್ಲಿ ಹುಟ್ಟಿದ್ದಲ್ಲ, ಬೇರೆಲ್ಲಿಂದಲೋ ಬಂದಿರಬೇಕು ಎಂಬುದು ವಿಜ್ಞಾನಿಗಳು ತಿಳಿಸಿದ್ದು ಕೆಲವರಿಗೆ ನೆನಪಿರುತ್ತದೆ. ಆದರೆ ಈ ಮಾದರಿಯ ಸಂಶೋಧನೆಯನ್ನು ನಡೆಸಿದವರು ಯಾರು ಎಂದು ಕೇಳ ಬಯಸುವಿರಾದರೆ ಅವರೇ ಜೆನೆಟಿಸಿಸ್ಟ್‌ಗಳು.
ಈ ಕೆಲಸದಲ್ಲಿ ಎಲೆಕ್ಟ್ರಾನ್ ಮೈಕ್ರೊಸ್ಕೋಪ್, ಸೂಪರ್ ಕಂಪ್ಯೂಟರ್‌ಗಳು ಮುಖ್ಯ ಪಾತ್ರ ವಹಿಸುತ್ತವೆ. ಇದಕ್ಕೆ ವರ್ಷಾಂತರ ಕಾಲ ಸಮಯವನ್ನು ಮುಡಿಪಿಟ್ಟು ವಿಜ್ಞಾನಿಗಳು, ಕಾರ್ಯ ನಿರ್ವಹಿಸುತ್ತಾರೆ. ಇವರಲ್ಲಿ ಸಸ್ಯ ಸಂಬಂಧಿತ ವಿಜ್ಞಾನಿಗಳೂ ಇದ್ದು, ಸಸ್ಯದ ತಳಿಗಳನ್ನೂ ಡಿಎನ್‌ಎಗಳನ್ನು ಬದಲಾಯಿಸಿ ಹೆಚ್ಚು ಇಳುವರಿ ತರುವ ತಳಿಗಳನ್ನು ತಯಾರಿಸಿಕೊಡುವುದುಂಟು. ವಿದ್ಯಾಭ್ಯಾಸ ಹೀಗಿರಲಿ
ಜೆನೆಟಿಸಿಸ್ಟ್ ಆಗಲು ವಿಜ್ಞಾನ ವಿಷಯ ಕುರಿತ ಪಿಯುಸಿ ಬಳಿಕ ಜೆನೆಟಿಕ್/ಅಗ್ರಿಕಲ್ಚರ್/ ಹ್ಯೂಮನ್ ಬಯಾಲಜಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದು, ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಜೆನೆಟಿಕ್ಸ್ ಮತ್ತು ಪಿಎಚ್‌ಡಿ ಮಾಡಿದರೆ ಜೆನೆಟಿಸಿಸ್ಟ್ ಆಗಬಹುದು. ಇನ್ನೊಂದು ವಿಧಾನದಲ್ಲಿ ಪಿಯು ಬಳಿಕ ಹ್ಯೂಮನ್ ಬಯಾಲಜಿ ಪದವಿ ಪೂರೈಸಿ, ಜೆನೆಟಿಕ್ಸ್ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಮಾಡಿಯೂ ಗುರಿ ಸಾಧಿಸಬಹುದು. ಇದರಲ್ಲಿ ಪಾಪ್ಯುಲೇಷನ್ ಜೆನೆಟಿಸಿಸ್ಟ್, ಬಯೋ ಜೆನೆಟಿಸಿಸ್ಟ್, ಮೊಲಾಕ್ಯುಲರ್ ಜೆನೆಟಿಸಿಸ್ಟ್, ಸೈಟೋ ಜೆನೆಟಿಸಿಸ್ಟ್ ವಿವಿಧ ಮಾದರಿಗಳಿವೆ.
Related Articles
ಮಾನವ ಅಥವಾ ಪ್ರಾಣಿವರ್ಗದ ಹುಟ್ಟು ಬೆಳವಣಿಗೆ ಇತಿಹಾಸದ ಅರಿವು ಜೈವಿಕ ಅವಸ್ಥಾಂತರದ ಬಗ್ಗೆ ತಿಳಿವಳಿಕೆ, ಆ ಕ್ಷೇತ್ರದ ಬಗ್ಗೆ ಹೆಚ್ಚಿನ ಅಧ್ಯಯನ ಉತ್ತಮ ಗಣಿತ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯ, ಸಂಶೋಧನೆಯಲ್ಲಿ ಕಾರ್ಯಕ್ಷಮತೆ ಮತ್ತು ಸಹನೆ ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಜವಾಬ್ದಾರಿ ಹೊರುವ ಮತ್ತು ಸವಾಲನ್ನು ಸ್ವೀಕರಿಸುವ ನಾಯಕತ್ವ ಪ್ರವೃತ್ತಿ ಅಗತ್ಯ
Advertisement
ಅವಕಾಶಗಳುಮೆಡಿಕಲ್ ಸೈನ್ಸ್ ಮತ್ತು ಅಗ್ರಿಕಲ್ಚರ್ ಸೈನ್ಸ್ ಇನ್ಸ್‌ಟಿಟ್ಯೂಟ್ ಪ್ರಯೋಗಾಲಯಗಳು
ರಾಷ್ಟ್ರೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಸಂಶೋಧನಾ ವಿಭಾಗ
ಜೆನೆಟಿಕ್ ಟೆಸ್ಟಿಂಗ್ ಲ್ಯಾಬ್‌ಗಳು
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಓದಲು ಕಾಲೇಜುಗಳು
ಆಕ್ಸ್‌ಫರ್ಡ್ ಕಾಲೇಜ್ ಆಫ್ ಸೈನ್ಸ್, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು
ಇಂಡಿಯನ್ ಅಕಾಡೆಮಿ ಡಿಗ್ರಿ ಕಾಲೇಜು, ಕಲ್ಯಾಣ ನಗರ, ಬೆಂಗಳೂರು
ಎಂ.ಎಸ್ ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್
ಬೆಂಗಳೂರು ಸಿಟಿ ಕಾಲೇಜು, ಕಲ್ಯಾಣ ನಗರ, ಬೆಂಗಳೂರು
ಸೆಂಟ್ ಜಾರ್ಜ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್, ಸೈನ್ಸ್ ಅಂಡ್ ನರ್ಸಿಂಗ್, ಬಾಣಸವಾಡಿ, ಬೆಂಗಳೂರು
ಆಲ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ನವದೆಹಲಿ ಎನ್ ಅನಂತನಾಗ್