ಅದೇನು ಹೆಣ್ಣು ಮಕ್ಕಳ್ಳೋ ಏನೊ? ನಯ ನಾಜುಕು ನಾಚಿಕೆ ಯಾವುದು ಇಲ್ಲ ಇತ್ತೀಚಿನ ಹೆಣ್ಣು ಮಕ್ಕಳಿಗೆ. ಮೊನ್ನೆ ನಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ಅಂತ ಹೋಗಿದ್ದೆ. ಅಲ್ಲಿ ಒಬ್ಳು ಹುಡುಗಿ ಅಸಭ್ಯ ಬಟ್ಟೆ ಹಾಕೊಂಡು ಬಂದಿದ್ಲು ಅಂತೀನಿ?! ಥು!!! ಥು!! ಕಾಲ ತುಂಬಾ ಕೆಟ್ಟು ಹೋಯ್ತಪ್ಪ….. ಇಂಥಹ ಬಹುತೇಕ ಮಾತುಕತೆಗಳನ್ನ ನಾವುಗಳು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಕೇಳುತ್ತಲೇ ಇರುತ್ತೇವೆ.
ಆದರೆ ಪ್ರಾಮಾಣಿಕವಾಗಿ ಹೇಳಿ. ಈಗಿನ ಕಾಲ ಬದಲಾಗಿದೆಯೋ ಅಥವಾ ಈಗಿನ ಕಾಲದಲ್ಲಿನ ಜನರ ನಡವಳಿಕೆಗಳು ಬದಲಾಗಿದೆಯೋ? ಈಗ ನನ್ನ ಪ್ರಶ್ನೆ ಏನೆಂದರೆ ಆ ಸಿನೆಮಾದಲ್ಲಿನ ಅಥವಾ ಆ ಕಾರ್ಯಕ್ರಮದಲ್ಲಿ ಆ ಹುಡುಗಿಯರು ಹಾಕಿದ್ದ ಬಟ್ಟೆಗಳ ಬಗ್ಗೆ ಯಾಕೆ ಮಾತಾಡಬೇಕು? ಸ್ನೇಹಿತರ ಅಥವಾ ಸ್ನೇಹಿತೆಯರೇ ನಡುವಿನ ಗಾಢವಾದ ಸ್ನೇಹ ಕಾಣ ಸಿಗುವುದಿಲ್ಲವೇ ಯಾಕೆ?.
ಅಣ್ಣ ತಮ್ಮಂದಿರ ನಡುವಿನ ಬಾಂಧವ್ಯ ಕಾಣ ಸಿಗುವುದಿಲ್ಲವೇ?, ಸಂಬಂಧಗಳ ಮೌಲ್ಯ ಕಾಣ ಸಿಗುವುದಿಲ್ಲವೇ? ಇಷ್ಟೆಲ್ಲಾ ಒಳ್ಳೇ ವಿಷಯಗಳು ಇರುವಾಗ ನಮ್ಮ ಕಣ್ಣು, ಮನಸು, ಬುದ್ಧಿ ಯಾತಕ್ಕೆ ಕೆಟ್ಟದ್ದರ ಬಗ್ಗೆಯೇ ಯೋಚಿಸುತ್ತದೆ, ಮಾತನಾಡುತ್ತದೆ.
ಇದರರ್ಥ ಇಷ್ಟೇ. ನಾವು ಪ್ರಪಂಚವನ್ನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾ ಎಲ್ಲದರಲ್ಲೂ ಋಣಾತ್ಮಕ ಅಥವಾ ನಕರಾತ್ಮಕ ವಿಷಯಗಳನ್ನೇ ಗಣನೆಗೆ ತೆಗೆದುಕೊಳ್ಳುತ್ತ ಅದರ ಬಗ್ಗೆಯೇ ಯೋಚಿಸುತ್ತೇವೆ.ಅದೇ ನಮ್ಮ ಯೋಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ನೋಡಿ. ಋಣಾತ್ಮಕ ವಿಷಯಗಳನ್ನ ಗಣನೆಗೆ ತೆಗೆದುಕೊಳ್ಳುವ ಬದಲು ಅದರಲ್ಲಿರುವ ಧಣಾತ್ಮಕ ಅಥವಾ ಸಕರಾತ್ಮಕ ವಿಷಯಗಳನ್ನ ಗಣನೆಗೆ ತೆಗೆದುಕೊಳ್ಳಿ. ಆಗ ನಮ್ಮ ಕಣ್ಣಿಗೆ ಎಲ್ಲದರಲ್ಲೂ ಒಳ್ಳೆಯದೇ ಕಾಣಿಸುತ್ತದೆ.
ನಮ್ಮ ಬುದ್ಧಿ ಮತ್ತೆ,ಯೋಚನಾ ಶಕ್ತಿ ಸಕರಾತ್ಮಕ ಮನಸ್ಥಿತಿಯ ಮೇಲೆ ಎಲ್ಲವೂ ನಿಂತಿದೆ. ಪ್ರತಿಯೊಂದು ವಿಷಯದಲ್ಲಾಗಲಿ ಅಥವಾ ಕೆಲಸಗಲ್ಲಿ ಆಗಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ಪ್ರವೃತ್ತಿಗಳು ಇದ್ದೇ ಇರುತ್ತದೆ.ಆದರೆ ಅದನ್ನ ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಚಿಂತನೆ ಅವಲಂಬಿತವಾಗಿರುತ್ತದೆ.ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ ಕಾಣಿಸುವುದಂತೆ.ನಕರಾತ್ಮಕ ಮನಸ್ಥಿತಿ ಗೆದ್ದಲು ಇದ್ದ ಹಾಗೇ. ನಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತಾ ಹೋಗುತ್ತಿದ್ದ ಹಾಗೇ ನಮ್ಮ ಸಕರಾತ್ಮಕ ಚಿಂತನೆಗಳು ಗೆದ್ದಲು ಕೊರೆದ ಹಾಗಗುತ್ತದೆ.
ಯಾವ ವ್ಯಕ್ತಿ ನಕರಾತ್ಮಕವಾಗಿ ಯೋಚಿಸುತ್ತಾನೋ ಅದು ಅವನ ವೈಯುಕ್ತಿಕ ಜೀವನದ ಮೇಲೆ ಅಡ್ಡ ಪರಿಣಾಮ ಬಿದ್ದೇ ಬೀರುತ್ತದೆ. ಪರಿಣಾಮವಾಗಿ ಅವನು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಬಿಡುತ್ತಾನೆ.ಅದೇ ಧನಾತ್ಮಕವಾಗಿ ಯೋಚಿಸುವ ವ್ಯಕ್ತಿ ಅವನ ಸಕರಾತ್ಮಕ ಮನಸ್ಥಿತಿಯ ಫಲವಾಗಿ ಎಲ್ಲ ವಿಷಯದಲ್ಲೂ ಅತ್ಯುತ್ತಮ ಫಲಿತಾಂಶವನ್ನೇ ಕಾಣುತ್ತಾನೆ. ಪರಿಣಾಮವಾಗಿ ಯಶಸ್ಸು ಅವನದಾಗುತ್ತದೆ ಮತ್ತು ಅವನು ಉತ್ತುಂಗಕ್ಕೆ ಏರುತ್ತಾನೆ. ಇದೇ ಒಬ್ಬ ಸಕಾರಾತ್ಮಕ ಚಿಂತಕನಿಗೂ ಒಬ್ಬ ನಕರಾತ್ಮಕ ಚಿಂತಕನಿಗೂ ಇರುವ ನಡುವಿನ ವ್ಯತ್ಯಾಸ. ಧನಾತ್ಮಕವಾಗಿ ಯೋಚಿಸಿ, ಸಕಾರಾತ್ಮಕವಾಗಿರಿ. ಮತ್ತು ಧನಾತ್ಮಕ ಫಲಿತಾಂಶವನ್ನು ಪಡೆಯಿರಿ.
-ಸುಸ್ಮಿತಾ ಕೆ. ಎನ್.
ಅನಂತಾಡಿ