Advertisement

Maharashtra election: ವರ್ಲಿ ಕ್ಷೇತ್ರದಲ್ಲಿ ಆದಿತ್ಯ vs ಮಿಲಿಂದ್‌

01:13 AM Oct 28, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಪಕ್ಷವು ರವಿವಾರ ತನ್ನ 20 ಅಭ್ಯರ್ಥಿ ಗಳ 2ನೇ ಪಟ್ಟಿ ಬಿಡುಗಡೆಗೊಳಿ ಸಿದೆ. ವಿಪಕ್ಷ ಉದ್ಧವ್‌ ಬಣದ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸ್ಪರ್ಧಿಸುತ್ತಿರುವ ವರ್ಲಿ ಕ್ಷೇತ್ರದಲ್ಲಿ ಶಿಂಧೆ ಶಿವಸೇನೆಯು ರಾಜ್ಯಸಭಾ ಸಂಸದ ಮಿಲಿಂದ್‌ ದೇವೊರಾರನ್ನು ಕಣಕ್ಕಿಳಿಸಿದ್ದು, ಇದು ಚುನಾವಣ ಕಾಳಗದ ಕಾವು ಹೆಚ್ಚಿಸಿದಂತಾಗಿದೆ.

Advertisement

ಆದಿತ್ಯ ಠಾಕ್ರೆ ಅವರು ಉದ್ಧವ್‌ ಶಿವಸೇನೆ ಮುಖ್ಯಸ್ಥರಾದ ಉದ್ಧವ್‌ ಠಾಕ್ರೆ ಅವರ ಪುತ್ರ ಮಾತ್ರವಲ್ಲದೇ, ಕಳೆದ ಬಾರಿಯೂ ವರ್ಲಿ ಕ್ಷೇತ್ರದಿಂದ ಜಯ ಸಾಧಿಸಿ ಸಚಿವರಾಗಿದ್ದರು. ಇತ್ತ ರಾಜ್ಯಸಭಾ ಸಂಸದರಾಗಿರುವ ಮಿಲಿಂದ್‌ ಈ ವರ್ಷಾರಂಭದಲ್ಲಿ ಕಾಂಗ್ರೆಸ್‌ ತೊರೆದು ಶಿಂಧೆ ಶಿವಸೇನೆ ಸೇರ್ಪಡೆ ಗೊಂಡಿದ್ದರು. ಈ ಬಾರಿ ಆದಿತ್ಯ ಹಾಗೂ ಮಿಲಿಂದ್‌ ನಡುವೆ ತೀವ್ರ ಜಿದ್ದಾ ಜಿದ್ದಿ ಏರ್ಪ ಡ ಲಿದ್ದು, ವರ್ಲಿ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಮಿಲಿಂದ್‌ ಹೊರತಾಗಿ ಪ್ರಮುಖ ನಾಯಕರಾದ ಸಂಜಯ್‌ ನಿರುಪಮ್‌ ಅವರನ್ನು ದಿಂಡೋಶಿ ಕ್ಷೇತ್ರದಿಂದ, ನಿರೇಶ್‌ ರಾಣೆ ಅವರನ್ನು ಕುಡಲ್‌ ಕ್ಷೇತ್ರದಿಂದ ಮತ್ತು ರಾಜೇಂದ್ರ ಗವಿತ್‌ ಅವರನ್ನು ಪಾಲಾ^ರ್‌ನಿಂದ ಕಣಕ್ಕಿಳಿಸಲಾಗಿದೆ.

ಸ್ವರಾ ಭಾಸ್ಕರ್‌ ಪತಿ ಅನುಶಕ್ತಿ ನಗರದಲ್ಲಿ ಶರದ್‌ ಬಣದಿಂದ ಕಣಕ್ಕೆ
ನಟಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕಿ ಸ್ವರಾ ಭಾಸ್ಕರ್‌ ಅವರ ಪತಿ ಫ‌ಹಾದ್‌ ಅಹ್ಮದ್‌, ಎಸ್‌ಪಿ ತೊರೆದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ)ಗೆ ಸೇರ್ಪಡೆಗೊಂಡಿದ್ದಾರೆ. ಈ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ಅನುಶಕ್ತಿ ನಗರದಿಂದ ಕಣಕ್ಕಿಳಿಯಲಿರುವ ಅವರು ಅಜಿತ್‌ ಬಣದ ಸನಾ ಮಲ್ಲಿಕ್‌ ವಿರುದ್ಧ ಸೆಣಸಾಡಲಿದ್ದಾರೆ. ಫ‌ಹಾದ್‌ ಅವರು ಎಸ್‌ಪಿಯ ಮಹಾರಾಷ್ಟ್ರ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next