Advertisement

ಡೋಕ್ಲಾಂ ವಿವಾದಿತ ಪ್ರದೇಶ : ಜ|ರಾವತ್‌ ಹೇಳಿಕೆಗೆ ಚೀನ ಗರಂ

05:07 PM Jan 15, 2018 | Team Udayavani |

ಬೀಜಿಂಗ್‌ : ಭಾರತ – ಚೀನ ಸೇನೆಯ ಸುದೀರ್ಘ‌ ಕಾಲದ ಮುಖಾಮುಖೀಗೆ ಸಾಕ್ಷಿಯಾದ ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಂ ವಿವಾದಿತ ಪ್ರದೇಶ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿರುವುದು ರಚನಾತ್ಮಕವಲ್ಲದ ಟೀಕೆಯಾಗಿದೆ ಎಂದು ಚೀನ ಅದನ್ನು ಬಲವಾಗಿ ಖಂಡಿಸಿದೆ.

Advertisement

ಜನರಲ್‌ ರಾವತ್‌ ಅವರ ವಿವಾದ್ಮಾಕ ಹೇಳಿಕೆಗೆ ಕೋಪೋದ್ರಿಕ ಪ್ರತಿಕ್ರಿಯೆ ನೀಡಿರುವ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಾಂಗ್‌ ಅವರು, “ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು  ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಕಳೆದ ವರ್ಷ ಸೆಪ್ಟಂಬರ್‌ನಲ್ಲಿ  ಬ್ರಿಕ್ಸ್‌ ಶೃಂಗದಲ್ಲಿ ಉಭಯ ದೇಶಗಳ ಗಡಿಯಲ್ಲಿ ಶಾಂತಿ, ನೆಮ್ಮದಿಯನ್ನು ಕಾಪಿಡುವ ನಿಟ್ಟಿನಲ್ಲಿ ಸಾಧಿಸಿದ ಒಮ್ಮತದ ಸ್ಪೂರ್ತಿಗೆ ಇದು ವಿರುದ್ಧವಾಗಿದೆ’ ಎಂದು ಹೇಳಿದರು. 

ಜನರಲ್‌ ರಾವತ್‌ ಅವರು ಎರಡು ದಿನಗಳ ಹಿಂದಷ್ಟೇ “ಗಡಿ ನಿಯಂತ್ರಣ ರೇಖೆಯಲ್ಲಿ ಚೀನ ಹೇರುತ್ತಿರುವ ಒತ್ತಡವನ್ನು ಅನುಲಕ್ಷಿಸಿ ಭಾರತ ಈಗಿನ್ನು  ಪಾಕ್‌ ಗಡಿಯಲ್ಲಿನ ತನ್ನ ಕೇಂದ್ರೀಕರಣವನ್ನು ಚೀನ ಗಡಿಗೆ ವರ್ಗಾಯಿಸುವ ಅಗತ್ಯವಿದೆ’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next