Advertisement
ಜಿ.ಪಂ. ಸದಸ್ಯರಾದ ಶ್ರೀಲತಾ ಸುರೇಶ್, ಲಕ್ಷ್ಮೀ ಮಂಜು ಬಿಲ್ಲವ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ತಾ.ಪಂ. ಸದಸ್ಯ ವೈಲೆಟ್ ಬೆರೆಟ್ಟೊ, ತಾ| ವೈದ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ತಾ| ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ, ಶಿಶು ಕಲ್ಯಾಣಾಭಿವೃದ್ಧಿ ಇಲಾಖೆಯ ತಾ| ಯೋಜನಾಧಿಕಾರಿ (ಪ್ರಭಾರ) ನಿರಂಜನ್, ಮಹಿಳಾ ಸಾಂತ್ವನ ಕೇಂದ್ರದ ರಾಧಾದಾಸ್‌ಮತ್ತಿತರರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಗ್ರೇಸಿ ಗೋನ್ಸಾಲ್ವಿಸ್ ಪ್ರಸ್ತಾವಿಸಿದರು. ರಾಜೇಶ್ವರಿ ನಿರ್ವಹಿಸಿದರು. ಭಾಗ್ಯವತಿ ವಂದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರದಿಂದ ರಾಜ್ಯದಾದ್ಯಂತ “ಗೆಳತಿ’ ಎನ್ನುವ ವಿಶೇಷ ಮಹಿಳಾ ಚಿಕಿತ್ಸಾ ಘಟಕ ಆರಂಭಗೊಳ್ಳುತ್ತಿದೆ. ಇನ್ನು ರಾಜ್ಯದ ಎಲ್ಲ 145 ತಾಲೂಕು ಆಸ್ಪತ್ರೆಗಳಲ್ಲಿಯೂ ದಿನದ 24 ಗಂಟೆಯೂ ಈ ಸೇವೆ ಸಿಗಲಿದೆ.