Advertisement
ದುರ್ಯೋಧನನ ಸೈನ್ಯದಲ್ಲಿದ್ದವರನ್ನು ನೋಡಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಾನೆ. ಇಲ್ಲಿ ಅರ್ಜುನನಲ್ಲಿ ಅಹಂಕಾರ ಮನಃಸ್ಥಿತಿ ಕಂಡುಬರುತ್ತದೆ. ಯುದ್ಧದಲ್ಲಿ ಎರಡು ರೀತಿ. ಆಯ್ಕೆ ಮಾಡಿದವರೊಂದಿಗೆ ಯುದ್ಧ, ಇನ್ನೊಂದು ಎದುರಾದವರೊಂದಿಗೆಲ್ಲ ಯುದ್ಧ. ಅರ್ಜುನ ನನ್ನ ಹತ್ತಿರ ಯುದ್ಧ ಮಾಡಲು ಯಾರು ಬಂದಿದ್ದಾರೆಂದು ನೋಡಬೇಕೆನ್ನುತ್ತಾನೆ. ಅಂದರೆ ತನ್ನ ಹತ್ತಿರ ಯುದ್ಧ ಮಾಡುವ ಧೀರರು ಯಾರು ಎಂಬ ಅಹಂಭಾವವಿತ್ತು. ಅರ್ಜುನನೆಂದರೆ ಇಂದ್ರ. ಇಂದ್ರನೆಂದರೆ ಐಶ್ವರ್ಯದ ಪ್ರತೀಕ. ಇದರಿಂದ ಅಹಂಕಾರ ಬಂದದ್ದು. ಅರ್ಜುನ ಎರಡು ಸೇನೆಗಳ ಮಧ್ಯೆ ನಿಲ್ಲಿಸು ಎಂದು ಹೇಳಿದ್ದೇ ವಿನಾ ಭೀಷ್ಮದ್ರೋಣರ ಎದುರು ನಿಲ್ಲಿಸು ಎಂದು ಹೇಳಿರಲಿಲ್ಲ. ಭೀಷ್ಮದ್ರೋಣರ ಎದುರು ನಿಲ್ಲಿಸಿದರೆ ಮಾತ್ರ ಅರ್ಜುನನಿಗೆ ವಿಷಾದ ಯೋಗ ಬರುತ್ತದೆ ಎಂದು ತಿಳಿದಿದ್ದ ಶ್ರೀಕೃಷ್ಣ ಅರ್ಜುನನ ಅಹಂಕಾರಕ್ಕೆ ತಕ್ಕುದಾಗಿ ಭೀಷ್ಮದ್ರೋಣರ ಎದುರು ನಿಲ್ಲಿಸಿದ್ದು. ಆತನ ಅಹಂಕಾರ ನೀರಾದದ್ದೂ ಅಲ್ಲಿಯೇ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811