ಗಾಜಾ: ಯುದ್ಧ ಪೀಡಿತ ಎನ್‌ಕ್ಲೇವ್‌ನ ಉತ್ತರದಲ್ಲಿರುವ ತನ್ನ ಮನೆಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಗಾಜಾದ ಆಸ್ಪತ್ರೆಗೆ ನಡೆದು ಹೋದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇಮಾನ್ ಅಲ್-ಮಸ್ರಿ ಎಂಬ ಮಹಿಳೆಯೇ ಐದು ಕಿಲೋಮೀಟರ್ ನಡೆದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.
ಈ ಕುರಿತು ವಿವರವಾಗಿ ಮಾಹಿತಿ ನೀಡಿದ ಮಸ್ರಿ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ಸಂದರ್ಭ ಆರು ತಿಂಗಳ ಗರ್ಭಿಣಿಯಾಗಿದ್ದ ನಾನು ತನ್ನ ಪುಟ್ಟ ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲಿ ಬೀಟ್ ಹನುನ್‌ನಲ್ಲಿರುವ ಮನೆಯಿಂದ ಸುರಕ್ಷತೆಗಾಗಿ ಪಲಾಯನ ಮಾಡಿ ಜಬಾಲಿಯಾ ಶಿಬಿರದಲ್ಲಿ ಆಶ್ರಯ ಪಡೆದೆ. ಆದರೆ, ಶಿಬಿರದ ಮೇಲಿನ ದಾಳಿಗಳಿಗೆ ಹೆದರಿ, ಅಲ್ಲಿಂದ ದಕ್ಷಿಣದಲ್ಲಿರುವ ಡೈರ್ ಅಲ್ ಬಲಾಹ್ ನಗರಕ್ಕೆ ಹೋಗುವಂತೆ ಅಲ್ಲಿದ್ದ ಜನ ನನ್ನನ್ನು ಒತ್ತಾಯಿಸಿದರು ಅದರಂತೆ ನಾನು ಡೈರ್ ಅಲ್ ಬಾಲಾಹ್ ತಲುಪಿ ಅಲ್ಲಿದ್ದ ಶಾಲೆಯೊಂದರಲ್ಲಿ ಉಳಿದುಕೊಂಡೆ ಎಂದು ಹೇಳಿದ್ದಾರೆ.
ಈ ವೇಳೆ ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೆ ಅಲಲ್ದೆ ನನಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ಹೀಗಾಗಿ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತಹೀನತೆಯಿಂದ ಬಳಲುತ್ತಿದ್ದ ನಾನು ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಯಿತು ಇದಾದ ಬಳಿಕ ನಾನು ಡಿಸೆಂಬರ್ ಡಿಸೆಂಬರ್ 18 ರಂದು ತುರ್ತು ಸಿಸೇರಿಯನ್‌ಗೆ ಒಳಗಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದೆ ಎಂದು ಹೇಳಿದ್ದಾರೆ.
ಆದರೆ ಈ ವೇಳೆ ಯುದ್ಧ ಆರಂಭವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದ ನಿಟ್ಟಿನಲ್ಲಿ ಇತರ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ತೆರಳುವಂತೆ ಆಸ್ಪತ್ರೆ ಸಿಬಂದಿಗಳು ಹೇಳಿದ್ದಾರೆ ಆದರೆ ಆರೋಗ್ಯದಲ್ಲಿ ದುರ್ಬಲವಾಗಿದ್ದ ಕಾರಣ ಆಸ್ಪತ್ರೆಯಿಂದ ಹೊರ ಬರುವ ಸ್ಥಿತಿಯಲ್ಲಿ ಇರಲಿಲ್ಲ ಆದರೂ ಆಸ್ಪತ್ರೆಯ ಸಿಬ್ಬಂದಿಗಳ ಒತ್ತಾಯಕ್ಕೆ ಆಸ್ಪತ್ರೆಯಿಂದ ಹೊರಬಂದು ಡೇರ್ ಅಲ್ ಬಾಲಾಹ್‌ನಲ್ಲಿ ಇಕ್ಕಟ್ಟಾದ ಶಾಲಾ ಕೊಠಡಿ-ಆಶ್ರಯದಲ್ಲಿ ಆಶ್ರಯ ಪಡೆದುಕೊಂಡು ಈಗ, ಟಿಯಾ, ಲಿನ್ ಮತ್ತು ಯಾಸರ್ ಅವರೊಂದಿಗೆ ತಮ್ಮ ವಿಸ್ತೃತ ಕುಟುಂಬದ ಸುಮಾರು 50 ಇತರ ಸದಸ್ಯರೊಂದಿಗೆ ವಾಸಿಸುತ್ತಿದ್ದೇನೆ ಎಂದು ಇಮಾನ್ ಅಲ್-ಮಸ್ರಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 2023 Recap: ರಷ್ಯಾ ಯುದ್ಧ ಸೇರಿ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಹತ್ತು ಘಟನೆಗಳು