Advertisement
17ರ ಹರೆಯದ ಪೀಲೆ ಸ್ವೀಡನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬ್ರಝಿಲ್ ತಂಡವನ್ನು ಮುನ್ನಡೆಸಿದ್ದರು. ಮಾತ್ರವಲ್ಲದೇ ವೈಯಕ್ತಿಕವಾಗಿ ಆರು ಗೋಲು ದಾಖಲಿಸಿ ಬ್ರಝಿಲ್ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.
Related Articles
Advertisement
ದೋಹಾ: ಮಾಜಿ ಚಾಂಪಿ ಯನ್ ಸ್ಪೇನ್ ತಂಡವು ವಿಶ್ವಕಪ್ ಫುಟ್ ಬಾಲ್ ಕೂಟದ ಆರಂಭಿಕ ಪಂದ್ಯ ದಲ್ಲಿ ಭರ್ಜರಿ ಗೆಲುವು ದಾಖಲಿಸಿ ಶುಭಾ ರಂಭಗೈದಿದೆ. ಬುಧವಾರ ನಡೆದ “ಇ’ ಬಣದ ಪಂದ್ಯದಲ್ಲಿ ಫೆರಾನ್ ಟೊರೆಸ್ ಅವರ ಅವಳಿ ಗೋಲುಗಳ ನೆರವಿನಿಂದ ಸ್ಪೇನ್ ತಂಡವು ಕೋಸ್ಟಾರಿಕಾ ತಂಡವನ್ನು 7-0 ಗೋಲುಗಳಿಂದ ಸೋಲಿಸಿ ಸಂಭ್ರಮಿಸಿದೆ. ಈ ಮೂಲಕ ಸ್ಪೇನ್ ವಿಶ್ವಕಪ್‌ನಲ್ಲಿ 100 ಗೋಲು ಪೂರ್ತಿಗೊಳಿಸಿದ ಸಾಧನೆ ಮಾಡಿದೆ.
ಫೆರಾನ್ ಟೊರೆಸ್ ಅವರ ಅವಳಿ ಗೋಲುಗಳ ಸಹಿತ ಡ್ಯಾನಿ ಒಲ್ಮೊ, ಗವಿ, ಮಾರ್ಕೊ ಅಸೆನ್ಸಿಯೊ, ಕಾರ್ಲೋಸ್ ಸೊಲೆರ್, ಅಲ್ವಾರೊ ಮೊರಾಟ ಅವರು ದಾಖಲಿಸಿದ ಗೋಲುಗಳಿಂದ ಸ್ಪೇನ್ ಭರ್ಜರಿ ಜಯ ಕಾಣುವಂತಾಯಿತು. ಮಾತ್ರವ್ಲದೇ ವಿಶ್ವಕಪ್‌ನಲ್ಲಿ 100 ಗೋಲುಗಳ ಕ್ಲಬ್‌ಗ ಸೇರ್ಪಡೆಗೊಂಡಿತು. ಇದು ವಿಶ್ವಕಪ್‌ಗೆ 16ನೇ ಬಾರಿ ಪ್ರವೇಶ ಪಡೆದಿರುವ ಸ್ಪೇನ್ ತಂಡದ ಅತೀ ದೊಡ್ಡ ಅಂತರದ ಗೆಲುವು ಆಗಿದೆ.
ಕೋಸ್ಟಾರಿಕಾ ಕಳಪೆ ತಂಡವೆಂದು ನಾವು ಆಲೋಚಿಸುವುದಿಲ್ಲ. ನಮ್ಮ ಸಾಮರ್ಥ್ಯದಿಂದಲೇ ಈ ಗೆಲುವು ದಾಖ ಲಾಗಿದೆ. ನಾವು ಗೆಲುವಿಗೆ ಅರ್ಹರು ಕೂಡ ಎಂದು ಒಲ್ಮೊ ಹೇಳಿದ್ದಾರೆ. ನಮ್ಮ ತಂಡವು ಬಲಿಷ್ಠವಾಗಿದೆ ಮತ್ತು ಇದೇ ರೀತಿಯ ನಿರ್ವಹಣೆಯೊಂದಿಗೆ ನಾವು ಮುಂದುವರಿಯುವುದು ಅಗತ್ಯವಾಗಿದೆ ಆದರೆ ಈ ಭರ್ಜರಿ ಗೆಲುವು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಎಂದವರು ಹೇಳಿದರು.
ಸ್ಪೇನ್ ನಿಯಂತ್ರಣ:
ಪಂದ್ಯದ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಪೆಡ್ರಿ, ಒಲ್ಮೊ, ಗವಿ ಮತ್ತು ಅಸೆನ್ಸಿಯೊ ಅವರ ಅಮೋಘ ಆಟದೆದುರು ಕೋಸ್ಟಾರಿಕಾ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ವಿಫಲವಾಯಿತು. ಐದನೇ ನಿಮಿಷದಲ್ಲಿ ಸ್ಪೇನ್ ಗೋಲು ಖಾತೆ ತೆರೆಯಿತು. ಪೆಡ್ರಿ ನೀಡಿದ ಉತ್ತಮ ಪಾಸನ್ನು ಒಲ್ಮೊ ಉತ್ತಮವಾಗಿ ಹೊಡೆದು ಗೋಲು ಖಾತೆ ತೆರೆದರು. ಸ್ವಲ್ಪ ಹೊತ್ತಿನಲ್ಲಿಯೇ ಅಸೆನ್ಸಿಯೊ ಅವರಿಗೆ ಗೋಲು ಹೊಡೆಯುವ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಗೋಲು ಹೊಡೆಯಲು ವಿಫಲರಾದರು. ಪೆಡ್ರಿ ಈ ಪಂದ್ಯದುದ್ದಕ್ಕೂ ಅಮೋಘವಾಗಿ ಆಡಿ ಗಮನ ಸೆಳೆದರು. ಸ್ಪೇನ್‌ನ ಪ್ರತಿಯೊಂದು ದಾಳಿ ವೇಳೆ ಪೆಡ್ರಿ ಅವರ ಕೊಡುಗೆಯಿತ್ತು.
18ರ ಹರೆಯದ ಗವಿ ಕೂಡ ಈ ಪಂದ್ಯದಲ್ಲಿ ಗೋಲು ಹೊಡೆದ ಸಾಧನೆ ಮಾಡಿದರಲ್ಲದೇ ವಿಶ್ವಕಪ್‌ನಲ್ಲಿ ಗೋಲು ಹೊಡೆದ ಸ್ಪೇನ್‌ನ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು.
ಸೋಲಿನಿಂದ ತೀವ್ರ ನೋವು:
ಈ ಸೋಲಿನಿಂದ ತೀವ್ರ ನೋವಾಗಿದೆ ಎಂದು ಕೋಸ್ಟಾರಿಕಾ ತಂಡದ ಡಿಫೆಂಡರ್ ಕೆಂಡಲ್ ವಾಟ್ಸನ್ ಹೇಳಿದ್ದಾರೆ. ಇಂತಹ ಫಲಿತಾಂಶವನ್ನು ಯಾರೂ ಕೂಡ ಅನುಭವಿಸಲು ಸಾಧ್ಯವಿಲ್ಲ. ವಿಶ್ವಕಪ್‌ನಲ್ಲಿ 0-7 ಅಂತರದ ಸೋಲು ಆಘಾತವನ್ನುಂಟು ಮಾಡಿದೆ ಎಂದರು. ನಾವು ಮುಂದಿನ ಎರಡು ಪಂದ್ಯಗಳಲ್ಲಿ ಪ್ರಬಲ ಹೋರಾಟ ನೀಡಿ ಗೆಲ್ಲಲು ಪ್ರಯತ್ನಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.