Advertisement
ಮೂರು ದಿನಗಳಲ್ಲಿ ಅದಾನಿ ಸಂಪತ್ತಿನಲ್ಲಿ 34 ಶತಕೋಟಿ ಡಾಲರ್(2.78 ಲಕ್ಷ ಕೋಟಿ ರೂ.) ಕೊಚ್ಚಿಹೋಗಿದೆ. ಹೀಗಾಗಿ, ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದಲ್ಲಿ ಅದಾನಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಮಂತರ ಪೈಕಿ ಟಾಪ್ 4ನೇ ಸ್ಥಾನದಲ್ಲಿದ್ದ ಅದಾನಿ ಈಗ 11ನೇ ಸ್ಥಾನಕ್ಕೆ ಇಳಿದಿದ್ದಾರೆ. ಪ್ರಸ್ತುತ ಅವರ ಸಂಪತ್ತಿನ ಮೌಲ್ಯ 84.4 ಶತಕೋಟಿ ಡಾಲರ್(6.90 ಲಕ್ಷ ಕೋಟಿ ರೂ.) ಆಗಿದ್ದು, ಅವರ ಪ್ರತಿಸ್ಪರ್ಧಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು (82.2 ಶತಕೋಟಿ ಡಾಲರ್) ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.
ಅದಾನಿ ಎಂಟರ್‌ಪ್ರೈಸಸ್ ಬಿಡುಗಡೆ ಮಾಡಿದ್ದ ಎಫ್ ಪಿಒ(ಫಾಲೋಆನ್ ಪಬ್ಲಿಕ್ ಆಫರ್) ಮಂಗಳವಾರ ಪೂರ್ಣಪ್ರಮಾಣದ ಚಂದಾದಾರಿಕೆ ಪಡೆದಿದೆ. ಒಟ್ಟು 20 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಕಂಪನಿ ಬಿಡುಗಡೆ ಮಾಡಿತ್ತು. ದೊಡ್ಡ ದೊಡ್ಡ ಕಂಪನಿಗಳು ಮತ್ತು ಸಾಂಸ್ಥಿಕ ಹೂಡಿಕೆದಾರರು ಈ ಷೇರುಗಳನ್ನು ಖರೀದಿಸಿದ್ದಾರೆ. 4.55 ಕೋಟಿ ಷೇರುಗಳನ್ನು ಮಾರಾಟಕ್ಕಿಟ್ಟಿದ್ದರೆ, ಅದಕ್ಕಿಂತಲೂ ಹೆಚ್ಚು ಅಂದರೆ 4.62 ಕೋಟಿ ಷೇರುಗಳಿಗೆ ಬೇಡಿಕೆ ಬಂದಿತ್ತು. ಆದರೆ, ಚಿಲ್ಲರೆ ಹೂಡಿಕೆದಾರರು ಮತ್ತು ಕಂಪನಿಯ ಉದ್ಯೋಗಿಗಳು ಈ ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರಲಿಲ್ಲ.