Advertisement
ಸರ್ಕಾರದ ಸೂಚನೆ ಅನ್ವಯ ಸೋಂಕಿತ ವ್ಯಕ್ತಿಗೆ ಪ್ರಸ್ತುತ ಏಳು ದಿನ ಮಾತ್ರ ಕ್ವಾರಂಟೈನ್ ಅವಧಿಯಾಗಿದೆ. ಹೀಗಾಗಿ, ಮನೆ ಐಸೋಲೇಷನ್, ಹೋಟೆಲ್ ಕ್ವಾರಂಟೈನ್, ಸ್ಟೆಪ್ ಡೌನ್ ಆಸ್ಪತ್ರೆ ಆರೈಕೆ ಅಥವಾ ಪಾಲಿಕೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಏಳು ದಿನ ಪ್ರತ್ಯೇಕವಾಗಿರಬೇಕು. ಈ ಅವಧಿ ಪೂರ್ಣ ಗೊಂಡ ನಂತರ ಅವರನ್ನು ಸೋಂಕಿನಿಂದ ಗುಣಮುಖರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಆ ವ್ಯಕ್ತಿಯು ಎಂದಿನ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಮತ್ತು ನಿರ್ವಹಣೆಗೆ ಪಾಲಿಕೆ ಕೇಂದ್ರ ಕಚೇರಿ ಹಾಗೂ ಎಂಟೂ ವಲಯಗಳಲ್ಲಿ ವಾರ್‌ರೂಮ್ ತೆರೆಯಲಾಗಿದ್ದು, ಇವುಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಜತೆಗೆ 27 ವಿಧಾನಸಭಾ ಕ್ಷೇತ್ರಗಳಲ್ಲೂ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ನಿತ್ಯ ಪಾಸಿಟಿವ್ ಪ್ರಕರಣಗಳ ಬಗ್ಗೆ 198 ವಾರ್ಡ್‌ಗಳು ಮತ್ತು 27 ಕ್ಷೇತ್ರಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದಕ್ಕಾಗಿ 35 ಮಂದಿ ಅಧಿಕಾರಿಗಳ ತಂಡ ರಚಿಸಲಾಗಿದೆ. ನಗರದಲ್ಲಿ ಪಾಲಿಕೆ ಮತ್ತು ಖಾಸಗಿ ಪ್ರಯೋಗಾಲಯ ಸೇರಿ ಒಟ್ಟು ಒಂದು ಲಕ್ಷಕ್ಕಿಂತ ಅಧಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ : 3 ನೇ ಅಲೆ ಎರಡೇ ದಿನಕ್ಕೆ ಡಬಲ್ ಆಗುತ್ತಿದೆ : ಡಾ. ಸುಧಾಕರ್ ಎಚ್ಚರಿಕೆ
Related Articles
ನಿಗದಿಪಡಿಸಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ 838 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಸಕ್ರಿಯ ಪ್ರಕರಣಗಳ ಸಂಖ್ಯೆ 60 ಸಾವಿರ ಗಡಿ ದಾಟಿದ್ದರೂ, 1,200 ಮಂದಿ (ಶೇ. 1ಕ್ಕಿಂತ ಕಡಿಮೆ) ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕೋವಿಡ್ ಹಾಸಿಗೆ ಸಾಮರ್ಥ್ಯ ಹೆಚ್ಚಳ ಮಾಡಲಾಗುವುದು. ಅಲ್ಲದೆ, ಜ. 14ರ ಒಳಗೆ ವಿಧಾನಸಭಾ ಕ್ಷೇತ್ರಕ್ಕೊಂದರಂತೆ 3 ಸಾವಿರ ಹಾಸಿಗೆ ಸಾಮರ್ಥ್ಯದ 27 ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗುವುದುಎಂದು ತಿಳಿಸಿದರು. ಬೆಡ್ ಬ್ಲಾಕಿಂಗ್‌ನಲ್ಲಿ ಯಾರದ್ದೂ ಕೈವಾಡ ಇಲ್ಲ
ನಗರಾದ್ಯಂತ ಕಾರ್ಯನಿರ್ವಹಿಸುತ್ತಿರುವ ಟ್ರಯಾಜಿಂಗ್ ತಂಡಗಳು ಶೇ. 40ರಷ್ಟು ರೋಗಿಗಳನ್ನು ಭೌತಿಕವಾಗಿ ತಪಾಸಣೆ ಮಾಡಲಿವೆ. ವೃದ್ಧರು, ದೀರ್ಘಕಾಲಿಕ ರೋಗದಿಂದ ಬಳಲುವವರು ಹಾಗೂ ಆರೋಗ್ಯದಲ್ಲಿ ಸಮಸ್ಯೆ ಇರುವವರು ಸೇರಿ ಶೇ. 40 ಮಂದಿಯನ್ನು ಭೌತಿಕವಾಗಿ ಪಾಲಿಕೆ ಆರೋಗ್ಯ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ನಂತರ, ಆಯಾ ವಿಧಾನಸಭಾ ಕ್ಷೇತ್ರವಾರು ಸೋಂಕಿತರಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿದ್ದಲ್ಲಿ ಹಾಸಿಗೆ ಬ್ಲಾಕಿಂಗ್ ಮಾಡಲಾಗುತ್ತದೆ. ಬೆಡ್ ಬ್ಲಾಕಿಂಗ್‌ನಲ್ಲಿ ಯಾರದ್ದೇ ಕೈವಾಡ ಬಳಕೆ ಆಗದಂತೆ, ಕ್ಷೇತ್ರಕ್ಕೊಬ್ಬ ವ್ಯಕ್ತಿಗೆ ಮಾತ್ರ ಆ್ಯಕ್ಸೆಸ್
ನೀಡಲಾಗುತ್ತದೆ ಎಂದು ಗೌರವ್‌ಗುಪ್ತ ಹೇಳಿದರು.