Advertisement

8 ಕೋಟಿ ಮಹಿಳೆಯರಿಗೆ ಗ್ಯಾಸ್‌

01:11 PM Jan 03, 2022 | Team Udayavani |

ಬಸವಕಲ್ಯಾಣ: ದೇಶದ ಬಡ ಕುಟುಂಬಗಳ ಮಹಿಳೆಯರಿಗೆ ಉಜ್ವಲ್‌ ಯೋಜನೆಯಲ್ಲಿ ಉಚಿತವಾಗಿ ಅಡುಗೆ ಅನಿಲ ವಿತರಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ಕಲ್ಯಾಣ ಮಂಟಪದಲ್ಲಿ ಕಾಳೇಕರ್‌ ಗ್ಯಾಸ್‌ ಏಜೆನ್ಸಿ ವತಿಯಿಂದ ಹಮ್ಮಿಕೊಂಡ ಉಜ್ವಲ್‌ ಯೋಜನೆ ಉಚಿತ ಅಡುಗೆ ಅನಿಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಆದರೆ ಮೋದಿ ಅವರು 8 ಕೋಟಿ ಮಹಿಳೆಯರಿಗೆ ಈ ಯೋಜನೆಯಲ್ಲಿ ಅಡುಗೆ ಅನಿಲ ವಿತರಿಸಿದರು. ಹೀಗಾಗಿ ತಾಲೂಕಿನ 25 ಸಾವಿರ ಮಹಿಳೆಯರಿಗೆ ಅನಿಲ ದೊರೆತಿದೆ. ಆದರೂ ಇನ್ನೂ ಬಡ ಕುಟುಂಬದವರು ಉಳಿದಿದ್ದರಿಂದ ಮತ್ತೆ ಉಚಿತ ಅನಿಲ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅರ್ಹ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಶರಣು ಸಲಗರ ಮಾತನಾಡಿ, ಜಾತಿ ಮತ ನೋಡದೆ, ಬಡವರಿಗೆ, ದಲಿತರಿಗೆ ಹಿಂದುಳಿದವರ ಮಹಿಳೆಯರಿಗೆ ಸಹಾಯ ಆಗಲಿ ಎಂಬ ಸುದುದ್ದೇಶದಿಂದ ಪ್ರಧಾನಿ ಮೋದಿ ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ನೀಡುತ್ತಿದ್ದಾರೆ ಎಂದರು.

ಮಾಜಿ ಶಾಸಕ ಎಂ.ಜಿ. ಮುಳೆ, ತಹಶೀಲ್ದಾರ್‌ ಸಾವಿತ್ರಿ ಸಲಗರ, ರವಿ ಗಾಯಕವಾಡ, ಅನಿಲ ಭೂಸಾರೆ, ಸಂಜೀವ ಕಾಳೇಕರ್‌, ಮಲ್ಲೇಶ ಕಾಳೆಕರ್‌, ದೀಪಕ ಗಾಯಕವಾಡ, ಅಶೋಕ ವಕಾರೆ, ಅರವಿಂದ ಮುತ್ತೆ, ರವಿ ಕೊಳಕುರ್‌ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next