Advertisement

ಘನ ತ್ಯಾಜ್ಯ ಘಟಕ ಸ್ಥಾಪನೆ ಎಂದು? ಸಂತೆಗೆ ಬರುವ ಗ್ರಾಮಸ್ಥರಿಗೆ ಗಬ್ಬು ವಾಸನೆ ಕಿರಿಕಿರಿ

12:48 PM Sep 29, 2020 | sudhir |

ಶಿರೂರ: ಗ್ರಾಮಸ್ಥರು ಗ್ರಾಮದ ಹಲವಾರು ಕಡೆ ಬೇಕಾಬಿಟ್ಟಿ ಹಾಕಿದ ಕಸ ವಿಲೇವಾರಿ ಮಾಡಲು ಗ್ರಾಮಕ್ಕೆ ಘನ ತ್ಯಾಜ್ಯ ಘಟಕ ಅವಶ್ಯವಿದ್ದು, ಹಲವಾರು ಬಾರಿ ಸರಕಾರದ ಗಮನಕ್ಕೆ ತಂದರೂ ಸಹ ಇಲ್ಲಿನ ಸಮಸ್ಯೆ ಮಾತ್ರ ಕಾರ್ಯರೂಪಕ್ಕೆ ಬಾರದಂತಾಗಿದೆ.

Advertisement

ಹಿಂದಿನ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ನೀಲಾನಗರ ರಸ್ತೆಗೆ ಹೊಂದಿಕೊಂಡಿರುವ ಸರಕಾರದ 1 ಎಕರೆ ಜಾಗದಲ್ಲಿ 25 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಪಂಚಾಯತ್‌ ರಾಜ್ಯ ಇಲಾಖೆಗೆ ಮಂಜೂರಾತಿಗಾಗಿ ಪತ್ರ ಬರೆದಿದ್ದಾರೆ. ಗ್ರಾಮದ ಪ್ರತಿ ಮನೆಗಳಿಗೂ ಹಸಿ ಕಸ ಮತ್ತು ಒಣ ಕಸ ಹಾಕಲು ಡಬ್ಬಿಗಳನ್ನು ನೀಡುವುದರೊಂದಿಗೆ ಕಸ ವಿಲೇವಾರಿ ಮಾಡಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡುವುದರ ಬಗ್ಗೆ ಈಗಾಗಲೇ ಸರಕಾರ ಗಮನಕ್ಕೆ ತಂದಿದ್ದಾರೆ. ಈ ಕಾರ್ಯ ಮಾತ್ರ ವಿಳಂಬವಾಗುತ್ತಿರುವುದರಿಂದ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಯಾವಾಗ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಶಿರೂರ ಗ್ರಾಪಂ ಎದುರೆ ತಿಪ್ಪೆ ಗುಂಡಿ: ಗ್ರಾಪಂ ಎದುರಿನ ಜಾಗದಲ್ಲಿ ಗ್ರಾಮಸ್ಥರು ಹಾಕಿದ ಕಸದ ರಾಶಿ ಸುಮಾರು ವರ್ಷಗಳಿಂದ ಹಾಗೇ ಉಳಿದಿದೆ. ಪ್ರತಿ ಸೋಮವಾರ ಇದೇ ಸ್ಥಳದಲ್ಲಿ ವಾರದ ಸಂತೆ ನಡೆಯುತ್ತದೆ. ಸಂತೆಗೆ ಬರುವ ಗ್ರಾಮಸ್ಥರಿಗೆ ಗಬ್ಬು ವಾಸನೆ ಕಿರಿಕಿರಿ ಉಂಟು ಮಾಡುತ್ತಿದೆ. ಇದೇ ಜಾಗದಲ್ಲಿ ಜನರಿಗೆ ಅನುಕೂಲದ ದೃಷ್ಟಿಯಿಂದ ಸಂತೆ ಕಟ್ಟೆ ನಿರ್ಮಾಣ ಮಾಡಲು ಗ್ರಾಪಂ ಸಹ ಈ ಬಗ್ಗೆ ಠರಾವು ಮಾಡಿದ್ದರೂ ಜಾರಿಗೊಂಡಿಲ್ಲ. ಜನಪ್ರತಿನಿಧಿಗಳು, ಗ್ರಾಪಂ ಅ ಧಿಕಾರಿಗಳು ಗಮನಹರಿಸಿ ಅಲ್ಲಲ್ಲಿ ಬಿದ್ದಿರುವ ಕಸ ವಿಲೇವಾರಿ ಮಾಡುವುದರೊಂದಿಗೆ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next