Advertisement

ವೈಜ್ಞಾನಿಕ ಕಸ ವಿಲೇವಾರಿ ಅಗತ್ಯ: ಗುಂಡಾನವರ

06:26 PM Dec 25, 2021 | Shwetha M |

ಹೂವಿನಹಿಪ್ಪರಗಿ: ಗ್ರಾಮೀಣ ಭಾರತ ವನ್ನು ಕಸ ಮುಕ್ತ ಹಾಗೂ ವೈಜ್ಞಾನಿಕ ವಿಲೇವಾರಿ ಮಾಡುವುದು ಸರಕಾರದ ಸದುದ್ದೇಶವಾಗಿದೆ. ಈ ನಿಟ್ಟಿನಲ್ಲಿ ಗ್ರಾಪಂ ವತಿಯಿಂದ ಘನತ್ಯಾಜ್ಯ ವಿಲೇವಾರಿ ವಾಹನಗಳು ಮನೆ- ಮನೆಗೆ ತೆರಳಿ ಕಸ ಸಂಗ್ರಹಿಸಲಿವೆ ಎಂದು ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಗುಂಡಾನವರ ಹೇಳಿದರು.

Advertisement

ಗ್ರಾಪಂ ಅವರಣದಲ್ಲಿ ನಡೆದ ಸ್ವತ್ಛ ವಾಹಿನಿಗೆ ಚಾಲನೆ ನೀಡಿ ಹಾಗೂ ಪ್ರತಿ ಮನೆಯಲ್ಲಿ ಕಸ ವಿಂಗಡನೆಗೆ ಕಸದ ಡಬ್ಬಿಗಳನ್ನು ಸಾರ್ವಜನಿಕರಿಗೆ ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಯು ಮಾನವನ ಮೂಲಭೂತ ಹಕ್ಕಾಗಿದ್ದು, ಉತ್ತಮ ಆರೋಗ್ಯ ಹೊಂದಿ ಗೌರವಯುತ ಜೀವನ ನಡೆಸಲು ಅಗತ್ಯವಾಗಿದೆ. ನೈರ್ಮಲ್ಯ ವ್ಯವಸ್ಥೆಯು ಸುವ್ಯವಸ್ಥಿತವಾಗಿರದೆ ಅಸುರಕ್ಷತೆಯಿಂದ ಕೂಡಿದ್ದರೆ ಅದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಎಂದರು.

ಗ್ರಾಪಂ ಸದಸ್ಯ ಶರಣು ಕಲ್ಲಪ್ಪಗೋಳ ಮಾತನಾಡಿ, ಪ್ರತಿಯೂಬ್ಬರು ಮನೆ ಮುಂದೆ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಲೇರಿ ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಶುಚಿತ್ವ ಕಾಪಾಡದಿದ್ದರೆ ಕಾಯಿಲೆಗಳನ್ನು ನಾವೇ ಆಹ್ವಾನಿಸದಂತಾಗುತ್ತದೆ ಎಂದರು.

ಪಿಡಿಒ ತಳವಾರ ಮಾತನಾಡಿ, ಗಾಂಧಿಧೀಜಿ ಕನಸು ನನಸು ಮಾಡುವ ಉದ್ದೇಶದಿಂದ ಗ್ರಾಪಂ ಕೇಂದ್ರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು ಪಂಚಾಯತ್‌ ವ್ಯಾಪ್ತಿಯ ಪ್ರತಿ ಮನೆ-ಮನೆಗೂ ತೆರಳಿ ಕಸ ಸಂಗ್ರಹ ಮಾಡಲಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

Advertisement

ಗ್ರಾಪಂ ಸದಸ್ಯ ಮುರುಗೇಶ ತಾಳಿಕೋಟಿ, ಚಂದು ಗುಂಡಾನವರ, ಮಲ್ಲಿಕಾರ್ಜುನ ನಾಡಗೌಡ, ಪರಶುರಾಮ ಮಳಗಿ, ಶಾಂತಪ್ಪ ಪೂಜಾರಿ, ರಮೇಶ ಶಿವಯೋಗಿ, ಯಲ್ಲಪ್ಪ ಕೊಲಕಾರ, ಸಿದ್ದು ಹಾದಿಮನಿ, ಸಿದ್ದು ಮೇಟಿ, ಉಮೇಶ ನಡುವಿನಮನಿ, ಮಲ್ಲಪ್ಪ ಮಾದರ, ಭೀಮಪ್ಪ ಮಾದರ, ಅಬ್ದುಲ್‌ ಮುಲ್ಲಾಗೋಳ, ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next